

ನವದೆಹಲಿ: ಸೀಮತಿ ಓವರ್ಗಳ ಸರಣಿ ನಂತರ ಭಾರತ ತಂಡವು ಸೆಪ್ಟೆಂಬರ್ ತಿಂಗಳಿನಿಂದ ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಮೊದಲಿಗೆ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಇದಾದ ಬಳಿಕ ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಆಡಲಿರುವ ಭಾರತ ತಂಡವು, ಆ ಬಳಿಕ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಸಾಮಾನ್ಯವಾಗಿ ನಾವು ನೋಡಿರುವಂತೆ ಯಾವುದಾದರು ಪ್ರತಿಷ್ಠಿತ ಟೂರ್ನಿ ಅಥವಾ ಸರಣಿ ಅರಂಭಕ್ಕೂ ಮುನ್ನ ಆ ದೇಶದ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಟೀಮ್ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ಭಾರತ ಕ್ರಿಕೆಟ್ ತಂಡದ ಕುರಿತು ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.
ಸ್ಪೋರ್ಟ್ಸ್ ತಕ್ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಟರ್ಬೋನೇಟರ್, ನಾವು ಹೆಚ್ಚು ತಿರುಗುವ ಪಿಚ್‌ಗಳಲ್ಲಿ ಆಡಲು ಪ್ರಾರಂಭಿಸಿದ್ದೇವೆ. ನಾವು ಎರಡೂವರೆ ದಿನಗಳಲ್ಲಿ ಪಂದ್ಯವನ್ನು ಗೆದ್ದಿದ್ದೇವೆ. 3-4 ದಿನ ಟರ್ನ್ ಆಗುವಂತಹ ಪಿಚ್ಗಳಿದ್ದರೆ ನಾವು ಪಂದ್ಯಗಳನ್ನು ಗೆಲ್ಲುತ್ತಿದ್ದೆವು. ಆದರೆ, ಬ್ಯಾಟರ್ಗಳಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು. ನಾವು ನಮ್ಮ ಎದುರಾಳಿಗಳನ್ನು ಔಟ್ ಮಾಡುತ್ತಿದ್ದ ರೀತಿಯಿಂದ ನಮ್ಮ ಬ್ಯಾಟರ್ಗಳ ಆತ್ಮವಿಶ್ವಾಸವನ್ನು ಕುಗ್ಗಿಸಿದ್ದೇವೆ. ಏಕೆಂದರೆ ನಮ್ಮ ಬ್ಯಾಟರ್ಗಳ ಮೇಲಿನ ವಿಶ್ವಾಸವನ್ನು ನಾವು ಕಳೆದುಕೊಂಡಿದ್ದೇವೆ
ನಮಗೆ ಇನ್ನೂ ಉತ್ತಮ ಅವಕಾಶವಿದೆ. ಟೆಸ್ಟ್ನಲ್ಲಿ ಭಾರತವನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮಲ್ಲಿರುವ ಬೌಲಿಂಗ್ ಲೈನ್ಅಪ್ ನೋಡಿದಾಗ 3 ತಪ್ಪಿದರೆ 5ನೇ ದಿನಂದು ನಮಗೆ ಟೆಸ್ಟ್ ಪಂದ್ಯವನ್ನು ಗೆಲ್ಲಿಸಿ ಕೊಡುತ್ತಾರೆ. ಆದರೆ ನೀವು ಉತ್ತಮ ಪಿಚ್‌ಗಳಲ್ಲಿ ಆಡಿದರೆ, ಬ್ಯಾಟರ್‌ಗಳು ರನ್ ಗಳಿಸುತ್ತಾರೆ ಮತ್ತು ಅವರ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಹಾಗೆಂದ ಮಾತ್ರಕ್ಕೆ ಅವರು ಸ್ಪಿನ್ ವಿರುದ್ಧ ಆಡುವುದಿಲ್ಲ ಎಂಬರ್ಥವಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯವಾಗಿದೆ.
ನನ್ನ ಪ್ರಕಾರ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ದುಲೀಪ್ ಟ್ರೋಫಿಯಲ್ಲಿ ಆಡಬೇಕೆಂದು ನಾನು ಹೇಳುತ್ತೇನೆ. ಈ ಪಂದ್ಯಾವಳಿಗಳಲ್ಲಿ ದೊಡ್ಡ ಆಟಗಾರರು ಕಾಣಿಸಿಕೊಂಡಾಗ, ಅದು ಅವರ ಜೊತೆಯಲ್ಲಿ ಆಡುವ ಇತರ ಆಟಗಾರರನ್ನು ಪ್ರೇರೇಪಿಸುತ್ತದೆ. ಈ ಆಟಗಾರರು ಟೂರ್ನಿಯ ಕಳೆಯನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಅದಾಗ್ಯೂ, ಅವರು ದೇಶೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಹೇಳಿದ್ದಾರೆ.