

ನವದೆಹಲಿ: ಭಾರತೀಯ ಕ್ರಿಕೆಟ್ಗೆ 15 ವರ್ಷಗಳ ಕಾಲ ಅಪಾರವಾದ ಕೊಡುಗೆಗಳನ್ನು ನೀಡಿ ಸ್ವಾತಂತ್ರ್ಯ ದಿನದಂದು ನಿವೃತ್ತಿ ಹೊಂದಿದ ಎಂಎಸ್ ಧೋನಿ ಅವರಿಗೆ ಈಗಾಗಲೆ ಹಾಲಿ-ಮಾಜಿ ಕ್ರಿಕೆಟಿಗರು, ಬಿಸಿಸಿಐ, ಐಸಿಸಿಯಿಂದಲೂ ಗೌರವ ಸಲ್ಲಿಕೆಯಾಗಿದೆ. ಈ ನಡುವೆ ವಿಶ್ವದ ಪ್ರಮುಖ ಸರ್ಚ್ ಎಂಜಿನ್ ಗೂಗಲ್ನಿಂದಲೂ ಎಂಎಸ್ ಧೋನಿ ಅವರಿಗೆ ವಿಶೇಷ ರೀತಿಯ ಗೌರವ ಸಲ್ಲಿಕೆಯಾಗಿದೆ.
‘ನಾವೂ ಪ್ರಯತ್ನಿಸುತ್ತಿದ್ದೇವೆ. ಆದರೆ ಎಂಎಸ್ ಧೋನಿ ನಿಮ್ಮಂತೆ ಯಾರೂ ಸಿಗಲಾರರು’ ಎಂದು ಗೂಗಲ್ ಇಂಡಿಯಾ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ. ಈ ಮೂಲಕ ಎಂಎಸ್ ಧೋನಿ ಅವರ ಸ್ಥಾನವನ್ನು ತುಂಬಬಲ್ಲಂಥವರು ಯಾರೂ ಸಿಗಲಾರರು ಎಂದು ಅಭಿಮಾನ ಮೆರೆದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರೂ, 39 ವರ್ಷದ ಧೋನಿ ಇನ್ನೂ ಕೆಲವರ್ಷಗಳ ಕಾಲ ಐಪಿಎಲ್ ಮೂಲಕ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಅವರು ಚೆನ್ನೈ ಸೂಪರ್ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.