ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಅಥ್ಲೀಟ್​ಗಳಿಗೆ 'ಆ್ಯಂಟಿ ಸೆಕ್ಸ್'​ ಬೆಡ್!ಸಾಮರ್ಥ್ಯ ಪರೀಕ್ಷಿಸಿದ ಟೆನಿಸ್​ ಆಟಗಾರ್ತಿಯರು

Anti Sex Bed
Published on

ಪ್ಯಾರಿಸ್: ಸಿಟಿ ಆಫ್​ ಲವ್​ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್​ ಆತಿಥ್ಯದಲ್ಲಿ ಜುಲೈ 26ರಿಂದ ಒಲಿಂಪಿಕ್ಸ್​ ಕ್ರೀಡಾಕೂಟ ಆರಂಭವಾಗಲಿದ್ದು, 33ನೇ ಆವೃತ್ತಿಯ ಕ್ರೀಡಾಕೂಟವು ಒಂದಿಲ್ಲೊಂದು ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್​ನಲ್ಲಿ 206 ದೇಶಗಳ 14,250 ಕ್ರೀಡಾಪಟುಗಳು ಭಾಗಿಯಾಗುತ್ತಿದ್ದು, ಈ ಎಲ್ಲಾ ಅಥ್ಲೀಟ್​ಗಳು ವಾಸಿಸುವ ಹೋಟೆಲ್​ ರೂಮ್​ಗಳಲ್ಲಿ ಆ್ಯಂಟಿ ಸೆಕ್ಸ್​ ಬೆಡ್​ ಹಾಕಿಸುವ ಮೂಲಕ ಆಯೋಜಕರು ಎಲ್ಲರ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ನಾವು ಕೇಳಿರುವಂತೆ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾಗಿಯಾಗುವ ಕ್ರೀಡಾಪಟುಗಳು ಲೈಂಗಿಕೆ ಕ್ರಿಯೆ ನಡೆಸುತ್ತಾರೆ. ಆದರೆ, ಕ್ರೀಡಾಪಟುಗಳು ಕ್ರೀಡೆಗಳತ್ತ ಗಮನಹರಿಸಲಿ ಎಂಬ ಕಾರಣಕ್ಕೆ ಈ ಬೆಡ್​ಗಳನ್ನು ಅಳವಡಿಸಲಾಗಿದೆ. 2021ರಲ್ಲಿ ಟೋಕಿಯೋದಲ್ಲಿ ನಡೆದ 32ನೇ ಆವೃತ್ತಿಯ ಕ್ರೀಡಾಕೂಟದಲ್ಲಿ ಕೋವಿಡ್​ ಆತಂಕದ ಕಾರಣ ಲೈಂಗಿಕ ಕ್ರಿಯೆಗೆ ನಿರ್ಬಂಧ ಹೇರಲಾಗಿತ್ತು. ಅದೇ ರೀತಿ ಈ ಬಾರಿಯೂ ಕೂಡ ಈ ನಿಯಮವನ್ನು ಮುಂದುವರೆಸಲು ಆಯೋಜಕರು ಯೋಜಿಸಿದ್ದು, ಆಟಗಾರರು ಈ ಬೆಡ್​ನ ಸಾಮರ್ಥ್ಯವನ್ನು ಪರೀಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಏಡ್ಸ್​​ನಂತಹ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರೀಡಾಕೂಟದ ಆಯೋಜರು ಆ್ಯಂಟಿ ಸೆಕ್ಸ್​ ಬೆಡ್​ಗಳನ್ನು ಅಳವಡಿಸಿದ್ದು, ಪ್ಯಾರಿಸ್​ ಒಲಿಂಪಿಕ್ಸ್​ ಆರಂಭಕ್ಕೂ ಮುನ್ನವೇ ಕೆಲವು ಅಥ್ಲೀಟ್​ಗಳು ಈ ಬಾರಿ ಆ್ಯಂಟಿ ಸೆಕ್ಸ್‌ ಬೆಡ್‌ಗಳನ್ನು ಅಳವಡಿಸದಂತೆ ಆಗ್ರಹಿಸಿದ್ದರು. ಇದರ ಹೊರತಾಗಿಯೂ ಆಯೋಜಕರು ಆ್ಯಂಟಿ ಸೆಕ್ಸ್​ ಬೆಡ್​ಗಳನ್ನು ಅಳವಡಿಸಿದ್ದು, ಆಟಗಾರರು ಕಿಡಿಕಾರಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಆ್ಯಂಟಿ ಸೆಕ್ಸ್​ ಬೆಡ್​ನ ವಿಶೇಷತೆ ಏನು?

 ಒಬ್ಬ ವ್ಯಕ್ತಿ ಮಾತ್ರ ಮಲಗಬಹುದಾದ ಹಾಸಿಗೆ ಇದಾಗಿದ್ದು, ಮರುಬಳಕೆ ಮಾಡಬಹುದಾದಂಥ ವಸ್ತುಗಳಿಂದ ಇದನ್ನು ಸಿದ್ಧಪಡಿಸಲಾಗಿದೆ. ಸುಮಾರು 200 ಕೆಜಿ ತೂಕವನ್ನು ಹೊರುವ ಸಾಮರ್ಥ್ಯ ಹೊಂದಿರುವ ಬೆಡ್​ ಇದಾಗಿದ್ದು, ಕಾರ್ಡ್‌ಬೋರ್ಡ್‌ನಿಂದ ತಯಾರಿಸಲಾಗಿದೆ. ಈ ಬೆಡ್​ಅನ್ನು ಆಸ್ಟ್ರೇಲಿಯಾದ ಟೆನಿಸ್ ತಾರೆಯರಾದ ಡೇರಿಯ ಸಾವಿಲ್ಲೆ ಮತ್ತು ಎಲೆನ್ ಪೆರೆಜ್‌ ಜತೆಯಾಗಿ ಪರಿಶೀಲಿಸಿದ್ದು, ಒಲಿಂಪಿಕ್ಸ್​ ವಿಲೇಜ್​ನ ಈ ಕಾರ್ಡ್​ಬೋರ್ಡ್​ಗಳನ್ನು ಪರಿಶೀಲಿಸಿದ್ದೇವೆ ಎಂದು ಹೇಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದಲ್ಲದೆ ಈ ಬಾರಿಯ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸಂಘಟಕರು 3 ಲಕ್ಷ ಕಾಂಡೋಮ್​ಗಳನ್ನು ಹಂಚಿದ್ದು, ಇದು ಒಲಿಂಪಿಕ್ಸ್​ ಇತಿಹಾಸದಲ್ಲೇ ಗರಿಷ್ಠ ಸಂಖ್ಯೆಯ ಕಾಂಡೋಮ್​ ಪೂರೈಕೆಯಾಗಿದೆ. 2021ರ ಟೋಕಿಯೊ ಒಲಿಂಪಿಕ್ಸ್​ ವೇಳೆ ಕೋವಿಡ್​ ಇದ್ದ ಕಾರಣ 1.5 ಲಕ್ಷ ಕಾಂಡೋಮ್​ಗಳನ್ನು ಹಂಚಲಾಗಿತ್ತು. ಈ ಬಾರಿ ಅದರ ದುಪ್ಪಟ್ಟು ಸಂಖ್ಯೆಯ ಕಾಂಡೋಮ್​ಗಳನ್ನು ಹಂಚಲಾಗಿದ್ದು, ಇದನ್ನು ಬಳಸದಂತೆ ಸೂಚಿಸಿದೆ. ಕವರ್​ನಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ 2024 ಎಂದು ಬರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net