ದೇಶೀಯ ಕ್ರಿಕೆಟ್ ದಿಗ್ಗಜ ವಾಸಿಂ ಜಾಫರ್ ಈಗ ಕೋಚ್...

WASIM JAFFER for web
Published on

ಮುಂಬೈ: ದೇಶೀಯ ಕ್ರಿಕೆಟ್ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ಆಟಗಾರ ವಾಸಿಂ ಜಾಫರ್, ಮುಂಬರುವ ದೇಶೀಯ ಕ್ರಿಕೆಟ್ ಋತುವಿಗೆ ಉತ್ತರಾಖಂಡ್ ರಾಜ್ಯ ತಂಡಕ್ಕೆ ಮುಖ್ಯಕೋಚ್ ಆಗಿ ನೇಮಕಗೊಂಡಿದ್ದಾರೆ. ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಜಾರ್ ಹೇಳಿಕೊಂಡಿದ್ದಾರೆ. ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿಹೆಚ್ಚು ರನ್ ಪೇರಿಸಿದ ದಾಖಲೆ ಹೊಂದಿರುವ ಜಾರ್, ಕಳೆದ ಮಾರ್ಚ್ ತಿಂಗಳಲಷ್ಟೇ ಜಾಫರ್ 20 ವರ್ಷಗಳ ವೃತ್ತಿ ಜೀವನಕ್ಕೆ ನಿವೃತ್ತಿ ಹೇಳಿದ್ದರು. ಮುಂಬೈ ಹಾಗೂ ವಿದರ್ಭ ತಂಡಗಳನ್ನು ಜಾಫರ್ ಪ್ರತಿನಿಧಿಸಿದ್ದರು. ಇದೀಗ ಮೊದಲ ಬಾರಿಗೆ ತಂಡವೊಂದಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

‘ಮೊದಲ ಬಾರಿಗೆ ತಂಡವೊಂದಕ್ಕೆ ಮುಖ್ಯಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದೀಗ ಹೊಸ ಸವಾಲು ಎದುರಾಗಿದ್ದು, ನನ್ನ ಪಾಲಿಗೆ ವಿಶೇಷವಾಗಿದೆ. ಹೊಸ ಸವಾಲಿಗೆ ಸಿದ್ಧವಾಗಿದ್ದೇನೆ’ ಎಂದು ಜಾಫರ್ ಹೇಳಿಕೊಂಡಿದ್ದಾರೆ. ಉತ್ತರಾಖಂಡ್ ಹೊಸ ತಂಡ, 2018-19ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್‌ಗೇರಿತ್ತು. ಇದೀಗ ಪ್ಲೇಟ್ ಗುಂಪಿನಲ್ಲಿದ್ದು, ಕೆಳ ಹಂತದಿಂದ ತಂಡವನ್ನು ಮೇಲಕ್ಕೇತ್ತಬೇಕಿದೆ ಎಂದು 42 ವರ್ಷದ ಜಾಫರ್ ತಿಳಿಸಿದ್ದಾರೆ. ಜಾರ್ ರಾಷ್ಟ್ರೀಯ ತಂಡದ ಪರ 31 ಟೆಸ್ಟ್ ಹಾಗೂ 2 ಏಕದಿನ ಪಂದ್ಯಗಳನ್ನಾಡಿದ್ದಾರೆ. 260 ಪ್ರಥಮ ದರ್ಜೆ ಪಂದ್ಯಗಳಿಂದ 57 ಶತಕ, 91 ಅರ್ಧಶತಕ ಒಳಗೊಂಡಂತೆ 19410 ರನ್ ಗಳಿಸಿದ್ದಾರೆ. ಉತ್ತರಾಖಂಡ ತಂಡ ರಣಜಿಗೆ ಪದಾರ್ಪಣೆ ಮಾಡಿದ 2018-19ನೇ ಸಾಲಿನಲ್ಲೇ ಎಂಟರಘಟ್ಟಕ್ಕೇರಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net