ಏಷ್ಯಾಕಪ್​ ಫೈನಲ್​ಗೆ ಅಕ್ಷರ್​ ಪಟೇಲ್​ ಗೈರು, ವಾಷಿಂಗ್ಟನ್​ ಸುಂದರ್​ಗೆ ತುರ್ತು ಕರೆ!

akshar wash web
Published on

ಕೊಲಂಬೊ: ಬಾಂಗ್ಲಾ ವಿರುದ್ಧದ ಪಂದ್ಯದ ವೇಳೆ ಬ್ಯಾಟಿಂಗ್​ ಮಾಡುವಾಗ ಅಕ್ಷರ್​ ಪಟೇಲ್​ಗೆ ಹಲವು ಗಾಯಗಳಾಗಿದ್ದು, ಶ್ರೀಲಂಕಾ ವಿರುದ್ಧ ಭಾನುವಾರ ನಡೆಯಲಿರುವ ಏಷ್ಯಾಕಪ್​ ಟೂರ್ನಿಯ ಫೈನಲ್​ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರಿಂದಾಗಿ ಅವರ ಸ್ಥಾನವನ್ನು ತುಂಬಲು ಆಫ್​​ ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ವಾಷಿಂಗ್ಟನ್​ ಸುಂದರ್​ಗೆ ತುರ್ತು ಕರೆ ನೀಡಲಾಗಿದೆ.

ಏಷ್ಯನ್​ ಗೇಮ್ಸ್​ ತಂಡದ ಭಾಗವಾಗಿ ಬೆಂಗಳೂರಿನ ಎನ್​ಸಿಎಯಲ್ಲಿದ್ದ ವಾಷಿಂಗ್ಟನ್​, ಶನಿವಾರ ಸಂಜೆಯಷ್ಟೇ ಕೊಲಂಬೊ ತಲುಪಿದ್ದಾರೆ. ಅಕ್ಷರ್​ ಪಟೇಲ್​ ಅವರ ಗಾಯದ ಪೂರ್ಣ ವಿವರ ಸದ್ಯಕ್ಕೆ ಲಭ್ಯವಿಲ್ಲ. ಆದರೆ ಅವರು ವಿಶ್ವಕಪ್​ಗೆ ಮುನ್ನ ಆಸ್ಟ್ರೆಲಿಯಾ ವಿರುದ್ಧದ ತವರಿನ ಏಕದಿನ ಸರಣಿಗೆ ಫಿಟ್​ ಆಗಲಿದ್ದಾರೆ ಎನ್ನಲಾಗಿದೆ.

ಲಂಕಾಗೆ ತೀಕ್ಷಣ ಅಲಭ್ಯ

ಲಂಕಾ ಸ್ಪಿನ್ನರ್​ ಮಹೀಶ್​ ತೀಕ್ಷಣ ಪಾಕ್​ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್​ ವೇಳೆ ಸ್ನಾಯುಸೆಳೆತದಿಂದ ಬಳಲಿದ್ದು, ಫೈನಲ್​ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಸಹನ್​ ಅರಚ್ಚಿಗೆ ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net