ಏಷ್ಯಾಕಪ್​ ಬೆನ್ನಲ್ಲೇ ಪಾಕ್​ ವೇಗಿ ಶಹೀನ್​ ಷಾ ಅಫ್ರಿದಿಗೆ 2ನೇ ಬಾರಿ ಶಾದಿ! ಹೀಗಿದೆ ಕಾರಣ…

Shaheen-Afridi web
Published on

ಲಾಹೋರ್​: ಪಾಕಿಸ್ತಾನ ಕ್ರಿಕೆಟ್​ ತಂಡದ ಪ್ರಮುಖ ವೇಗಿ ಶಹೀನ್​ ಷಾ ಅಫ್ರಿದಿ ಏಷ್ಯಾಕಪ್​ ಟೂರ್ನಿಯ ಬಳಿಕ 2ನೇ ಬಾರಿ ಮದುವೆಯಾಗಲಿದ್ದಾರೆ. ಹಾಗೆಂದು, ಇದು ಅವರ 2ನೇ ಮದುವೆ ಅಲ್ಲ, ಮೊದಲು ಮದುವೆಯಾಗಿರುವ ಹುಡುಗಿಯನ್ನೇ ಅವರು 2ನೇ ಸಲವೂ ವಿವಾಹವಾಗಲಿದ್ದಾರೆ!

ಪಾಕಿಸ್ತಾನದ ಮಾಜಿ ನಾಯಕ ಶಾಹಿದ್​ ಅಫ್ರಿದಿ ಅವರ ಪುತ್ರಿ ಅನ್ಶಾ ಅಫ್ರಿದಿಯನ್ನು ಕಳೆದ ಫೆಬ್ರವರಿಯಲ್ಲಿ ವಿವಾಹವಾಗಿದ್ದ ಶಹೀನ್​ ಷಾ ಅಫ್ರಿದಿ, ಸೆಪ್ಟೆಂಬರ್​ 19ರಂದು ಮತ್ತೆ ಮದುವೆಯಾಗಲಿದ್ದಾರೆ. ಈ ಮುನ್ನ ಅಫ್ರಿದಿ ಬುಡಕಟ್ಟು ಪದ್ಧತಿ ಅನ್ವಯ ನಡೆದ ಮೊದಲ ವಿವಾಹ ಅತ್ಯಂತ ಸರಳವಾಗಿತ್ತು. ಹೀಗಾಗಿ ಈ ಬಾರಿ ಕುಟುಂಬದ ಆಪ್ತರು ಮತ್ತು ಸ್ನೇಹಿತರನ್ನು ಆಹ್ವಾನಿಸಿ ಅದ್ದೂರಿ ವಿವಾಹ ಸಮಾರಂಭ ಏರ್ಪಡಿಸಲಾಗುತ್ತಿದೆ.

ಏಷ್ಯಾಕಪ್​ ಫೈನಲ್​ (ಸೆ. 17) ನಡೆದ ಎರಡೇ ದಿನಗಳ ಅಂತರದಲ್ಲಿ ವಿವಾಹ ಸಮಾರಂಭ ನಿಗದಿಯಾಗಿದೆ. ಫೈನಲ್​ಗೆ ಮಳೆ ಕಾಡಿದರೆ, ಸೆ. 18ರ ಮೀಸಲು ದಿನವೂ ಆಟ ಮುಂದುವರಿಯಲಿದೆ. ಹೀಗಾಗಿ ಪಾಕ್​ ತಂಡ ಫೈನಲ್​ಗೇರಿದರೆ ಶಹೀನ್​ ಷಾ ಅಫ್ರಿದಿಗೆ, ಏಷ್ಯಾಕಪ್ ಫೈನಲ್​ ಮುಗಿಸಿ ನೇರವಾಗಿ ವಿವಾಹಕ್ಕೆ ಹಾಜರಾಗಬೇಕಾದ ಸವಾಲೂ ಎದುರಾಗಬಹುದು. ಸೆ. 21ರಂದು ಆರತಕ್ಷತೆ ಸಮಾರಂಭವನ್ನೂ ನಿಗದಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net