VIDEO: 50 ಪ್ರಯತ್ನಗಳ ಬಳಿಕ ಕ್ಲಿಕ್ ಆದ ವಾರ್ನರ್ ದಂಪತಿ ಡ್ಯಾನ್ಸ್

david warner and mahesh babu song new
Published on

ಬೆಂಗಳೂರು: ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್‌ಗೂ ಟಿಕ್‌ಟಾಕ್‌ಗೂ ಅವಿನಾಭಾವ ಸಂಬಂಧ. ಲಾಕ್‌ಡೌನ್‌ನಿಂದಾಗಿ ಕ್ರಿಕೆಟ್ ಚಟುವಟಿಕೆಯಿಂದ ದೂರ ಉಳಿದಿರುವ ವಾರ್ನರ್, ದಿನಂಪ್ರತಿ ಪತ್ನಿ ಮಕ್ಕಳೊಂದಿಗೆ ವಿಭಿನ್ನ ಶೈಲಿಯಲ್ಲಿ ಟಿಕ್ ಟಾಕ್ ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಪ್ರತಿನಿಧಿಸುತ್ತಿರುವುದರಿಂದ ಬಹುತೇಕ ತೆಲುಗು ಹಾಡುಗಳಿಗೆ ಟಿಕ್‌ಟಾಕ್ ಮಾಡುತ್ತಿರುವ ವಾರ್ನರ್, ಇದೀಗ ಖ್ಯಾತ ನಟ ಮಹೇಶ್ ಬಾನು ಅಭಿನಯದ ‘ಸೇರಿಲೇರು ನೀಕೆವಾರು’ ಚಿತ್ರದ ಹಾಡಿಗೆ ಪತ್ನಿ ಕ್ಯಾಂಡೈಸ್ ಜತೆಗೂಡಿ ಡ್ಯಾನ್ಸ್ ಮಾಡಿದ್ದಾರೆ.

50 ಅಟೆಂಪ್ಟ್ ಬಳಿಕ ಸಿಕ್ಕ ಸ್ಟೆಪ್ಸ್ !

ಟಿಕ್‌ಟಾಕ್ ವಿಡಿಯೋಗಳನ್ನು ನೀರು ಕುಡಿದಷ್ಟೇ ಸುಲಭವಾಗಿ ಮಾಡುವ ಡೇವಿಡ್ ವಾರ್ನರ್, ಏಕೋ ಏನೋ ಈ ಬಾರಿ 50 ಬಾರಿ ಪ್ರಯತ್ನ ಪಟ್ಟರಂತೆ. ಡ್ಯಾನ್ಸ್‌ನ ಸ್ಟೆಪ್ಸ್ ಕೊಂಚ ಕಠಿಣವಾಗಿದ್ದೆ ಇದಕ್ಕೆ ಕಾರಣ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪ್ರಕಟಿಸಿರುವ ವಾರ್ನ್, 50 ಪ್ರಯತ್ನಗಳು ಹಾಗೂ ಬಳಿಕ ಆ ಪ್ರಯತ್ನಗಳ ವಿಡಿಯೋ ನಿಮ್ಮೊಂದಿಗೆ ಹಂಚಿಕೊಳ್ಳುವೆ ಎಂದು ಬರೆದುಕೊಂಡಿದ್ದಾರೆ. ವಿಡಿಯೋ ಪ್ರಕಟಿಸಿದ ಬೆನ್ನಹಿಂದೆಯೇ ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಇದಕ್ಕೂ ಮೊದಲು ಅಲ್ಲು ಅರ್ಜುನ್ ಅಭಿನಯದ ಚಿತ್ರವೊಂದರ ಬುಟ್ಟಾ ಬೊಮ್ಮಾ ಹಾಡಿಗೆ ಟಿಕ್‌ಟಾಕ್ ಮಾಡಿದ್ದು ಭಾರೀ ವೈರಲ್ ಆಗಿತ್ತು. ಕನ್ನಡತಿ ರಶ್ಮಿಕಾ ಮಂದಣ್ಣ ಹಾಗೂ ಮಹೇಶ್ ಬಾಬು ಜೋಡಿ ಮಾಡಿರುವ ವೇಗದಲ್ಲೇ ವಾರ್ನರ್ ದಂಪತಿ ಸ್ಟೆಪ್ಸ್ ಹಾಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಡೇವಿಡ್ ವಾರ್ನರ್, ತೆಲುಗು ಚಿತ್ರದ ಹಾಡುಗಳಿಗೆ, ಸಿನಿಮಾ ಡೈಲಾಗ್‌ಗಳಿಗೆ ಟಿಕ್ ಟಾಕ್ ಮಾಡುವ ಮೂಲಕ ತೆಲುಗು ಜನರ ಕೇಂದ್ರ ಬಿಂದುವಾಗಿದ್ದಾರೆ. ತೆಲುಗು ಚಿತ್ರದಲ್ಲಿ ದಯವಿಟ್ಟ ಅಭಿನಯಿಸಿ ವಾರ್ನರ್, ನೀವು ಯಾರಿಗೇನು ಕಮ್ಮಿಯಿಲ್ಲ ಎಂದು ಸಾವಿರಾರು ಮಂದಿ ವಾರ್ನರ್ ವಿಡಿಯೋಗಳಿಗೆ ಪ್ರತಿಕ್ರಿಯಿಸಿದ್ದಾರೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಅಬ್ಬರಿಸುವ ವಾರ್ನರ್, ಈ ಬಾರಿ ಐಪಿಎಲ್ ಮುಂದೂಡಿಕೆಯಾಗಿರುವುದರಿಂದ ಟಿಕ್‌ಟಾಕ್ ಮೂಲಕವೇ ತೆಲುಗು ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net