ಈ ರೀತಿ ಕಮ್​ಬ್ಯಾಕ್​ ಮಾಡಲು ಅವರು ಆಡಿದ ಮಾತುಗಳೇ ಪ್ರೇರಣೆ: ಹಾರ್ದಿಕ್​ ಪಾಂಡ್ಯ

Hardik Pandya
Published on

ಅಂಟಿಗುವಾ: 2023ರಲ್ಲಿ ಭಾರತದ ಅಥಿತ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದ ಹಾರ್ದಿಕ್​ ಪಾಂಡ್ಯ ಆ ಬಳಿಕ ಮುಂಬೈ ಇಂಡಿಯನ್ಸ್​ ನಾಯಕತ್ವದ ವಿಚಾರವಾಗಿ ಟ್ರೋಲ್​ ಆಗಿದ್ದರು. ಟಿ20 ವಿಶ್ವಕಪ್​ಗೆ ಆಯ್ಕೆಯಾಗುವುದು ಡೌಟ್​ ಎಂದು ಹೇಳಲಾಗಿತ್ತಾದರು. ಪಾಂಡ್ಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ತಂಡದಲ್ಲಿ ಸ್ಥಾನ ಪಡೆದ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿರುವ ಹಾರ್ದಿಕ್​ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇನ್ನೂ ತಮ್ಮ ಅಲ್ರೌಂಡ್​ ಪ್ರದರ್ಶನದ ಕುರಿತು ಮಾತನಾಡಿರುವ ಹಾರ್ದಿಕ್​ ನಾನು ಯಾವ ತಂಡದ ವಿರುದ್ಧ ಆಡುವಾಗ ಗಾಯಗೊಂಡಿದ್ದೆ. ಇಂದು ಅದೇ ತಂಡದ ವಿರುದ್ಧ ಆಡಿ ಗೆದ್ದಿರುವುದು ನನಗೆ ತುಂಬಾ ಖುಷಿ ನೀಡಿದೆ ಎಂದು ಹೇಳಿದ್ದಾರೆ.

Team India

ನಾನು ದೇಶ್ಕಕಾಗಿ ಆಡಲು ಅದೃಷ್ಠಶಾಲಿಯಾಗಿದ್ದೇನೆ. ಗಾಯಗೊಂಡ ಬಳಿಕ ಕಮ್​ಬ್ಯಾಕ್​ ಮಾಡಲು ಬಯಸಿದ್ದೆ ಮತ್ತು ಅದಕ್ಕಾಗಿ ಯೋಜನೆಗಳನ್ನು ರೂಪಿಸಿದ್ದೆ. ನಾನು ಈ ಬಗ್ಗೆ ನಮ್ಮ ಕೋಚ್​ ಅವರ ಬಳಿ ಮಾತನಾಡಿದ್ದೆ. ಅವರು ಕಷ್ಟಪಟ್ಟು ಕೆಲಸ ಮಾಡುವವರಿಗೆ ಅದೃಷ್ಟ ಕೈ ಹಿಡಿಯುತ್ತದೆ ಎಂದು ಹೇಳಿದ್ದರು. ಅವರು ಆಡಿದ ಆ ಮಾತುಗಳು ನನಗೆ ಚೆನ್ನಾಗಿ ಆಡಲು ಪ್ರೇರಣೆ ನೀಡಿತ್ತು.

ಟಿ20 ವಿಶ್ವಕಪ್​ನಲ್ಲಿ ನಾವು ತಂಡವಾಗಿ ಆಡುತ್ತಿದ್ದು, ಅಂದುಕೊಂಡಂತೆ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದೇವೆ. ಅಂಟಿಗುವಾದ ಪಿಚ್​ನಲ್ಲಿ ನಾವು 180 ರನ್​ ಗಳಿಸುವುದು ಹೆಚ್ಚು ಎಂದು ಭಾವಿಸಿದ್ದೆವು. ಆದರೆ, 196 ರನ್​ ಗಳಿಸಿದ್ದವು ಇದು ನಮ್ಮ ಗೆಲುವಿಗೆ ಸಹಕಾರಿಯಾಯ್ತು ಎಂದು ಟೀಮ್​ ಇಂಡಿಯಾ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಪಂದ್ಯದ ಬಳಿಕ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net