ಐಪಿಎಲ್​ನಲ್ಲಿ ನಿಧಾನಗತಿ ಶತಕ ಸಿಡಿಸಿದ ವಿರಾಟ್​ ಕೊಹ್ಲಿ; ಕನ್ನಡಿಗನನ್ನು ಸರಿಗಟ್ಟಿದ ಸ್ಟಾರ್​ ಬ್ಯಾಟರ್​!

web kohli century
Published on

ಜೈಪುರ: ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್​ಸಿಬಿಯ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ 67 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ಸಿಡಿಸಿದ 8 ಶತಕಗಳ ಪೈಕಿ ಮಾತ್ರವಲ್ಲ ಐಪಿಎಲ್​ ಇತಿಹಾಸದಲ್ಲೇ ಇದು ಜಂಟಿ ನಿಧಾನಗತಿಯ ಶತಕವೆನಿಸಿದೆ.

2009ರಲ್ಲಿ ಆರ್​ಸಿಬಿ ಪರವಾಗಿಯೇ ಮನೀಷ್​ ಪಾಂಡೆ ಕೂಡ 67 ಎಸೆತಗಳಲ್ಲೇ ಡೆಕ್ಕನ್​ ಚಾರ್ಜರ್ಸ್​ ವಿರುದ್ಧ ಶತಕ ಸಿಡಿಸಿದ್ದು ಹಿಂದಿನ ಅತಿ ನಿಧಾನಗತಿ ಶತಕವಾಗಿದೆ. ಇನ್ನು ಕೊಹ್ಲಿ ಐಪಿಎಲ್​ ಇನಿಂಗ್ಸ್​ವೊಂದರಲ್ಲಿ 2ನೇ ಅತ್ಯಧಿಕ ಎಸೆತ (72) ಎದುರಿಸಿದರು. ಬ್ರೆಂಡನ್​ ಮೆಕ್ಕಲಂ (73), ಮನೀಷ್​ ಪಾಂಡೆ (73) ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

ವಿರಾಟ್​ ಕೊಹ್ಲಿ (9) ಟಿ20 ಕ್ರಿಕೆಟ್​ನಲ್ಲಿ 3ನೇ ಗರಿಷ್ಠ ಶತಕವೀರ ಎನಿಸಿದರು. ಕ್ರಿಸ್​ ಗೇಲ್​ (22), ಬಾಬರ್​ ಅಜಮ್​ (11) ಮೊದಲೆರಡು ಸ್ಥಾನದಲ್ಲಿದ್ದಾರೆ. ಐಪಿಎಲ್​ನಲ್ಲಿ ಕೊಹ್ಲಿ ಶತಕ ಸಿಡಿಸಿದಾಗ ಆರ್​ಸಿಬಿ 3ನೇ ಬಾರಿ ಸೋಲು ಅನುಭವಿಸಿತು. ಸಂಜು ಸ್ಯಾಮ್ಸನ್​ ಮತ್ತು ಹಾಶಿಂ ಆಮ್ಲ ಅವರ 2 ಶತಕಗಳಿಗೆ ಸೋಲಾಗಿರುವುದು ಹಿಂದಿನ ಗರಿಷ್ಠ.

ಏಳೂವರೆ ಸಾವಿರ ರನ್​ಗಳಿಸಿದ ಕೊಹ್ಲಿ

ಐಪಿಎಲ್​ನಲ್ಲಿ ಗರಿಷ್ಠ ರನ್​ಗಳಿಸಿರುವ ಬ್ಯಾಟರ್​ ಆಗಿರುವ ವಿರಾಟ್​ ಕೊಹ್ಲಿ 7,500 ರನ್​ಗಳಿಸಿದ ಮೊದಲ ಆಟಗಾರ ಎನಿಸಿದರು. 242 ಪಂದ್ಯಗಳಲ್ಲಿ 52 ಅರ್ಧಶತಕ, 8 ಶತಕ ಸಿಡಿಸಿರುವ ಕೊಹ್ಲಿ ಇದುವರೆಗೆ ಒಟ್ಟು 7,597 ರನ್​ ಕಲೆಹಾಕಿ ಅಗ್ರಸ್ಥಾನದಲ್ಲಿದ್ದಾರೆ. ಶಿಖರ್​ ಧವನ್​ (6,755), ಡೇವಿಡ್​ ವಾರ್ನರ್​ (6,545), ರೋಹಿತ್​ ಶರ್ಮ (6,280) ನಂತರದ ಸ್ಥಾನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net