ವಿರಾಟ್ ಶತಕದ ನಡುವೆಯೂ ರಾಜಸ್ಥಾನಕ್ಕೆ ಮಣಿದ ಆರ್‌ಸಿಬಿ: ಅಬ್ಬರಿಸಿದ ಬಟ್ಲರ್

New-Project-5
Published on

ಜೈಪುರ: ಆರಂಭಿಕ ಜೋಸ್ ಬಟ್ಲರ್ (100* ರನ್,58 ಎಸೆತ, 9 ಬೌಂಡರಿ, 4 ಸಿಕ್ಸರ್) ಸಿಡಿಸಿದ ಟೂರ್ನಿ ಇತಿಹಾಸದ 6ನೇ ಶತಕದ ನೆರವಿನಿಂದ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-17ರಲ್ಲಿ ಪ್ರವಾಸಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದೆ. ಟೂರ್ನಿಯಲ್ಲಿ ಸತತ 4ನೇ ಗೆಲುವಿನೊಂದಿಗೆ ಅಜೇಯ ಓಟ ಮುಂದುವರಿಸಿರುವ ಸಂಜು ಸ್ಯಾಮ್ಸನ್ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (113* ರನ್, 72 ಎಸೆತ, 12 ಬೌಂಡರಿ, 4 ಸಿಕ್ಸರ್) ರನ್‌ಪ್ರವಾಹವನ್ನು ಜೈಪುರದಲ್ಲೂ ಮುಂದುವರಿಸಿದ ನಡುವೆಯೂ ಆರ್‌ಸಿಬಿ ತನ್ನ 5ನೇ ಲೀಗ್ ಪಂದ್ಯದಲ್ಲಿ ಸತತ ಮೂರನೇ ಸೋಲುಂಡು 8ನೇ ಸ್ಥಾನದಲ್ಲಿ ಉಳಿದಿದೆ.

ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ, ನಾಯಕ ್ಾ ಡು ಪ್ಲೆಸಿಸ್ (44 ರನ್, 33 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ ಮೊದಲ ವಿಕೆಟ್‌ಗೆ ಒದಗಿಸಿದೆ ಭದ್ರ ಅಡಿಪಾಯದ ನೆರವಿನಿಂದ 3 ವಿಕೆಟ್‌ಗೆ 183 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಆರಂಭಿಕ ಯಶಸ್ವಿ ಜೈಸ್ವಾಲ್ (0) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತದ ನಡುವೆಯೂ ಅನುಭವಿ ಜೋಸ್ ಬಟ್ಲರ್ ಹಾಗೂ ನಾಯಕ ಸಂಜು ಸ್ಯಾಮ್ಸನ್ (69 ರನ್, 42 ಎಸೆತ, 8 ಬೌಂಡರಿ, 2 ಸಿಕ್ಸರ್) ಭರ್ಜರಿ ಜತೆಯಾಟದ ಬಲದಿಂದ 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 189 ರನ್‌ಗಳಿಸಿದ ರಾಜಸ್ಥಾನ ಇನ್ನೂ 5 ಎಸೆತ ಬಾಕಿಯಿರುಂವತೆಯೇ ಗೆಲುವಿನ ಸಂಭ್ರಮ ಆಚರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net