

ಕೋಲ್ಕತ: ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಒಂದೇ ತಂಡದ ಪರ 250 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎಂಬ ವಿಶಿಷ್ಟ ಸಾಧನೆ ಮಾಡಿದ್ದಾರೆ. 18 ರನ್ಗಳ ಕಿರು ಇನಿಂಗ್ಸ್ನಲ್ಲಿ 2 ಸಿಕ್ಸರ್ ಸಿಡಿಸುವ ಮೂಲಕ ಅವರು ಈ ಹೆಗ್ಗಳಿಕೆಗೆ ಪಾತ್ರರಾದರು.
ಆರ್ಸಿಬಿ ಪರ ಕ್ರಿಸ್ ಗೇಲ್ 239 ಮತ್ತು ಎಬಿ ಡಿವಿಲಿಯರ್ಸ್ 238 ಸಿಕ್ಸರ್ ಸಿಡಿಸಿರುವುದು ನಂತರದ ಅತ್ಯುತ್ತಮವಾಗಿದೆ. ಆದರೆ ಚಾಂಪಿಯನ್ಸ್ ಲೀಗ್ ಟೂರ್ನಿಯನ್ನೂ ಸೇರಿಸಿದರೆ ಗೇಲ್ ಆರ್ಸಿಬಿ ಪರ ಸರ್ವಾಧಿಕ 263 ಸಿಕ್ಸರ್ ಸಿಡಿಸಿದ್ದಾರೆ. ಇದು ಟಿ20 ಕ್ರಿಕೆಟ್ನಲ್ಲಿ ತಂಡವೊಂದರ ಪರ ಗರಿಷ್ಠ ಸಿಕ್ಸರ್ ಸಾಧನೆಯಾಗಿದೆ.
ವಿರಾಟ್ ಕೊಹ್ಲಿ (250) ಐಪಿಎಲ್ನಲ್ಲಿ 250 ಸಿಕ್ಸರ್ ಸಿಡಿಸಿದ 4ನೇ ಬ್ಯಾಟರ್. ಕ್ರಿಸ್ ಗೇಲ್ (357), ರೋಹಿತ್ ಶರ್ಮ (275), ಎಬಿ ಡಿವಿಲಿಯರ್ಸ್ (251) ಮೊದಲ ಮೂವರು.