ಐಪಿಎಲ್​ ಫೈನಲ್ಸ್​ ಮಿಸ್ಸಾದ ಬೆನ್ನಲ್ಲೇ ಆಸ್ಟ್ರೇಲಿಯಾ ಟೆಸ್ಟ್​ ಮ್ಯಾಚ್​ನ ಫೈನಲ್ಸ್​ನ್ನೂ ಮಿಸ್​ ಮಾಡಿಕೊಳ್ಳಲಿದ್ದಾರೆ ಕೊಹ್ಲಿ

virat
Published on

ನವದೆಹಲಿ: ಈ ವರ್ಷದ ಐಪಿಎಲ್​ ಸರಣಿಯ ಫೈನಲ್ಸ್​ ಹಂತದವರೆಗೆ ಬಂದಿದ್ದ ಆರ್​ಸಿಬಿ ತಂಡ ಕೊನೆ ಹಂತದಲ್ಲಿ ಮುಗ್ಗರಿಸಿ, ಫೈನಲ್ಸ್​ನಿಂದ ಹೊರಗುಳಿದಿದೆ. ಕ್ಯಾಪ್ಟನ್​ ಕೊಹ್ಲಿ ತಂಡ ಫೈನಲ್ಸ್​ ಪಂದ್ಯವನ್ನು ಆಡದಂತಾಗಿದೆ. ಐಪಿಎಲ್​ ಬೆನ್ನಲ್ಲೇ ಆಸ್ಟ್ರೇಲಿಯಾ ಟೆಸ್ಟ್​ ಮ್ಯಾಚ್​ ಸರಣಿ ಕೂಡ ಆರಂಭವಾಗುತ್ತಿದ್ದು, ಇದರ ಫೈನಲ್​ ಪಂದ್ಯದಿಂದಲೂ ವಿರಾಟ್​ ಕೊಹ್ಲಿ ತಪ್ಪಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ನವೆಂಬರ್​ 27ಕ್ಕೆ ಆರಂಭವಾಗಲಿರುವ ಟೆಸ್ಟ್​ ಸರಣಿ ಜನವರಿ 15ಕ್ಕೆ ಮುಕ್ತಾಯವಾಗಲಿದೆ. ಜನವರಿಯಲ್ಲಿ ವಿರಾಟ್​ ಮತ್ತು ಅನುಷ್ಕಾ ದಂಪತಿ ಕುಟುಂಬಕ್ಕೆ ಮತ್ತೊಂದು ಜೀವದ ಆಗಮನವಾಗಲಿದೆ. ಗರ್ಭಿಣಿಯಾಗಿರುವ ಅನುಷ್ಕಾಗೆ ಜನವರಿಯಲ್ಲಿ 9 ತಿಂಗಳು ತುಂಬಲಿದ್ದು, ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಸಮಯದಲ್ಲಿ ಪಂದ್ಯಕ್ಕಿಂತ ಪತ್ನಿಯೊಂದಿಗೆ ಇರುವುದೇ ಮುಖ್ಯ ಎನ್ನುವ ಕಾರಣಕ್ಕೆ ವಿರಾಟ್​ ಭಾರತಕ್ಕೆ ವಾಪಾಸು ಬರಲಿದ್ದಾರೆ ಎನ್ನಲಾಗಿದೆ.

ಕೊಹ್ಲಿ ಸೇರಿ ಎಲ್ಲ ಆಟಗಾರರಿಗೆ ತಮ್ಮ ಪತ್ನಿಯನ್ನು ಆಸ್ಟ್ರೇಲೊಯಾಕ್ಕೆ ಕರೆದೊಯ್ಯಲು ಬಿಸಿಸಿಐ ಅನುಮತಿ ನೀಡಿದೆ. ಆದರೆ ಗರ್ಭಿಣಿ ಅನುಷ್ಕಾರನ್ನು ಕರೆದೊಯ್ಯದಿರಲು ಕೊಹ್ಲಿ ನಿರ್ಧರಿಸಿದ್ದಾರೆ. ಆಕೆಯ ಹೆರಿಗೆ ಸಮಯದಲ್ಲಿ ಭಾರತಕ್ಕೆ ಮರಳಲು ಬಿಸಿಸಿಐ ಅನುಮತಿ ಕೊಟ್ಟಿದೆ. ಹಾಗಾಗಿ ಕೊಹ್ಲಿ ಎರಡು ಟೆಸ್ಟ್​ ಪಂದ್ಯಗಳನ್ನಾಡಿ ವಾಪಾಸು ಬರಲಿದ್ದಾರೆ ಎನ್ನಲಾಗಿದೆ. ಇನ್ನುಳಿದ ಎರಡು ಪಂದ್ಯಗಳಿಗೆ ಅಜಿಂಕ್ಯಾ ರಹಾನೆ ನಾಯಕನಾಗಲಿದ್ದಾರೆ ಎನ್ನಲಾಗಿದೆ. ಈ ಹಿಂದಿನ ಆಸ್ಟ್ರೇಲಿಯಾ ಟೆಸ್ಟ್​ ಪಂದ್ಯದಲ್ಲಿ ರೋಹಿತ್​ ಶರ್ಮಾ ಅವರ ಪತ್ನಿ ಗರ್ಭಿಣಿಯಿದ್ದಿದ್ದರಿಂದ ಅವರನ್ನು ಕೊನೆಯ ಪಂದ್ಯ ಅಡಿಸದೆಯೇ ವಾಪಾಸು ಕಳುಹಿಸಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net