More

    ದೀಪಾವಳಿಗೆ ಪಟಾಕಿ ಹಚ್ಚಬಹುದು! ಆದರೆ ಈ ಗೈಡ್ ಲೈನ್ಸ್ ಪಾಲಿಸೋದು ಕಡ್ಡಾಯ

    ಬೆಂಗಳೂರು: ಮಾಹಾಮಾರಿ ಕರೊನಾಗೆ ಇಡೀ ಜಗತ್ತು ತಲ್ಲಣಿಸಿದ್ದು, ಸಾವು-ನೋವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧವಾಗಿರುವ ರಾಜ್ಯಸರ್ಕಾರ ಕೆಲ ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೆ ತಂದಿದೆ. ಅದರಂತೆ ಈ ಭಾರಿ ದೀಪಾವಳಿಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದ್ದು, ಇದೀಗ ದೀಪಾವಳಿ ಆಚರಣೆ ಸಂಬಂಧ ಸರ್ಕಾರ ಗೈಡ್ ಲೈನ್ಸ್ ಹೊರಡಿಸಿದೆ.

    ಪಟಾಕಿಯಿಂದ ಕರೊನಾ ರೋಗಿಗಳಿಗೆ ತೊಂದರೆಯಾಗಲಿದೆ, ಸೋಂಕಿನ ಪ್ರಮಾಣ ಅಧಿಕವಾಗಲಿದೆ ಎಂದು ತಜ್ಞರು ವರದಿ ನೀಡುತ್ತಿದ್ದಂತೆ ಎಚ್ಚೆತ್ತ ಸಿಎಂ ಯಡಿಯೂರಪ್ಪ, ಜನರ ಜೀವ ಉಳಿಸುವ ಮತ್ತು ಆರೋಗ್ಯ ದೃಷ್ಟಿಯಿಂದ ರಾಜ್ಯದಲ್ಲಿ ಪಟಾಕಿ ನಿಷೇಧಿಸಿ ಶುಕ್ರವಾರ ಬೆಳಗ್ಗೆ ಆದೇಶ ಹೊರಡಿಸಿದ್ದರು. ಇದರ ಮುಂದುವರಿದ ಭಾಗವಾಗಿ, ದೀಪಾವಳಿ ಹಬ್ಬ ಆಚರಣೆ ಸಂಬಂಧ ಶನಿವಾರ ಗೈಡ್ ಲೈನ್ಸ್ ಬಿಡುಗಡೆ ಮಾಡಲಾಗಿದೆ.

    2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ಹಸಿರು ಪಟಾಕಿಗಳನ್ನ ಬಿಟ್ಟು ಉಳಿದ ಯಾವುದೇ ಇತರ ಪಟಾಕಿಯನ್ನು ಮಾರಾಟ ಮಾಡುವಂತಿಲ್ಲ ಮತ್ತು ಸಿಡಿಸುವಂತಿಲ್ಲ. ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿ ಪಡೆದ ಮಾರಾಟಗಾರರು ‘ಹಸಿರು ಪಟಾಕಿ’ಗಳನ್ನು ಮಾತ್ರ ಮಾರಾಟ ಮಾಡತಕ್ಕದ್ದು. ಹಸಿರು ಪಟಾಕಿ ಮಾರಾಟ ಮಳಿಗೆಗಳನ್ನು ನವೆಂಬರ್​ 7ರಿಂದ 16ರ ವರೆಗೆ ಮಾತ್ರ ತೆರೆದಿರತಕ್ಕದ್ದು (9 ದಿನ ತೆರೆಯಲು ಮಾತ್ರ ಅವಕಾಶ) ಎಂದು ರಾಜ್ಯ ಸರ್ಕಾರ ಸೂಚಿಸಿದೆ.

    ಪರವಾನಗಿದಾರರು ಸಂಬಂಧಪಟ್ಟ ಇಲಾಖೆ/ಪ್ರಾಧಿಕಾರದಿಂದ ನೀಡಿರುವ ಪರವಾನಗಿಯಲ್ಲಿ ನಿಗದಿ ಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಹಸಿರು ಪಟಾಕಿ ಅಂಗಡಿಗಳನ್ನು ತೆರೆಯಬೇಕು. ಬೇರೆ ಸ್ಥಳಗಳಲ್ಲಿ ಮತ್ತು ಇನ್ನಿತರ ದಿನಾಂಕಗಳಲ್ಲಿ ಪಾಟಕಿ ಅಂಗಡಿಗಳನ್ನ ತೆರೆಯಬಾರದು. ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಹಸಿರು ಪಟಾಕಿ ಮಾರಾಟ ಮಳಿಗೆ ಸ್ಥಾಪಿಸಲು ಇಲಾಖೆ ಅನುಮತಿಸತಕ್ಕದ್ದು. ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ 6 ಮೀಟರ್ ಅಂತರವಿರಬೇಕು. ಪ್ರತಿಯೊಂದು ಮಳಿಗೆಯಲ್ಲೂ ಸಂಬಂಧಪಟ್ಟ ಇಲಾಖೆ ನೀಡಿದ ಪರವಾನಗಿ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದು, ಪರವಾನಗಿ ಪತ್ರ ಪಡೆದವರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು ಎಂದು ಗೈಡ್​ಲೈನ್ಸ್​ನಲ್ಲಿ ಸರ್ಕಾರ ತಿಳಿಸಿದೆ.

    ಹಸಿರು ಪಟಾಕಿ ಮಾರಾಟ ಮಳಿಗೆಗಳ ಸುತ್ತಮುತ್ತ ನಿತ್ಯ ಸ್ಯಾನಿಟೈಸರ್​ ಮಾಡುವುದು ಹಾಗೂ ಪಟಾಕಿಗಳ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್‌ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸುವ ಜತೆಗೆ 6 ಅಡಿ ಸಾಮಾಜಿಕ ಅಂತರ ಗುರುತಿಸುವುದು ಕಡ್ಡಾಯ. ಪಟಾಕಿ ವ್ಯಾಪಾರಿಗಳು ಮತ್ತು ಗ್ರಾಹಕರು ಮಾಸ್ಕ್ ಧರಿಸಿರಬೇಕು. ಹಸಿರು ಪಟಾಕಿ ಖರೀದಿ ವೇಳೆ ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

    ಆರ್​ ಆರ್​ ನಗರ- ಶಿರಾದಲ್ಲಿ ಗೆಲುವು ಯಾರಿಗೆ? ಹೊರಬಿತ್ತು ಮತದಾನೋತ್ತರ ಸಮೀಕ್ಷೆಯ ಫಲಿತಾಂಶ

    ಗಂಡನ ಆಟೋದಲ್ಲಿ ಸುತ್ತುತ್ತಾಳೆ, ಕ್ಷಣಾರ್ಧದಲ್ಲಿ ಲಕ್ಷ-ಲಕ್ಷ ಹಣ ತರ್ತಾಳೆ! ಬೆಚ್ಚಿಬೀಳಿಸುತ್ತೆ ಈ ದಂಪತಿಯ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts