ಜೈಸ್ವಾಲ್​​​ ರನ್​ಔಟ್​ ಆಗಲು Virat Kohli ಕಾರಣ; ಆಸ್ಟ್ರೇಲಿಯಾ ಆಟಗಾರನ​ ಹೇಳಿಕೆ ವೈರಲ್​

Jaiswal Virat
Published on

ಮೆಲ್ಬೋರ್ನ್​: ಪ್ರಸ್ತುತ ನಡೆಯುತ್ತಿರುವ ಬಾರ್ಡರ್​ ಗವಾಸ್ಕರ್​ ಟ್ರೋಫಿ (Border Gavaskar Trophy) ಟೆಸ್ಟ್​ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ (Team India) ಮತ್ತೊಮ್ಮೆ ಮುಗ್ಗರಿಸಿದ್ದು, ಫಾಲೋಆನ್​ ಭೀತಿ ಎದುರಿಸುತ್ತಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದು, ಮುಂಬರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫಿನಾಲೆ ದೃಷ್ಟಿಯಿಂದ ಭಾರತದ ಪಾಲಿಗೆ ಈ ಬೆಳವಣಿಗೆ ಮುಳುವಾಗುವ ಸಾಧ್ಯತೆ ಇದೆ.

ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ರೋಹಿತ್ ಶರ್ಮ ಹಾಗೂ ರಾಹುಲ್​ರ ವಿಕೆಟ್​ಅನ್ನು ಬೇಗನೆ ಕಳೆದುಕೊಂಡಿತು. ಈ ವೇಳೆ ಜತೆಯಾದ ವಿರಾಟ್​ ಕೊಹ್ಲಿ (Virat Kohli) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal) 102 ರನ್​ಗಳ ಜತೆಯಾಟವಾಡುವ ಮೂಲಕ ಆಸೀಸ್​ ಪಡೆಗೆ ತಕ್ಕ ತಿರುಗೇಟು ನೀಡುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, 82 ರನ್​ಗಳಿಸಿದ್ದ ವೇಳೆ ಇಲ್ಲದ ರನ್​ ಕದಿಯಲು ಹೋಗಿ ಜೈಸ್ವಾಲ್ ಔಟಾಗಿದ್ದು, ಟೀಮ್​ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಆದರೆ, ಜೈಸ್ವಾಲ್​ ರನ್​ಔಟ್​ ಆಗಲು ಕೊಹ್ಲಿ ಕಾರಣ ಎಂದು ಸ್ಟೀವ್​ ಸ್ಮಿತ್​ ಆರೋಪಿಸಿದ್ದಾರೆ.

ಎರಡನೇ ದಿನದ ಆಟದ ಕೊನೆಯಲ್ಲಿ ಯಶಸ್ವಿ ಜೈಸ್ವಾಲ್ ಔಟಾಗಿದ್ದು, ದೊಡ್ಡ ಬದಲಾವಣೆ ಎಂದರೆ ತಪ್ಪಾಗಲಾರದು. ಜೈಸ್ವಾಲ್​ 82 ರನ್​ ಗಳಿಸಿದಾಗ ರನ್​ ಓಡಲು ಮುಂದಾಗಿದ್ದರು, ಈ ವೇಳೆ ವಿರಾಟ್ (Virat Kohli)​ ಅವರನ್ನು ವಾಪಸ್​ ಹೋಗುವಂತೆ ಹೇಳಿದ್ದೆ ರನ್​ಔಟ್​ಗೆ ಕಾರಣವಾಯಿತು. ಇದು ಪಂದ್ಯದ ಸಂಪೂರ್ಣ ದಿಕ್ಕನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು. ಇದು ಕೇವಲ ಅದೃಷ್ಟವಾಗಿತ್ತು. ಕೆಲವೊಮ್ಮೆ ನೀವು ಪಾರ್ಟ್​ನರ್​ಶಿಪ್​ ಮುರಿದಾಗ ಬೇಗನೆ ವಿಕೆಟ್​ಗಳನ್ನು ಪಡೆಯಬಹುದು ಎಂದು ಸ್ಟೀವ್​ ಸ್ಮಿತ್​ ಅಭಿಪ್ರಾಯಪಟ್ಟಿದ್ದಾರೆ. 

ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್ (Border-Gavaskar)​ ಟೆಸ್ಟ್​ ಸರಣಿಯೂ ನವೆಂಬರ್​ 22ಕ್ಕೆ ಆರಂಭವಾಗಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net