

ಬೆಂಗಳೂರು: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಳೆದ ನಾಲ್ಕೂ ತಿಂಗಳಿಂದಲೂ ಮುಂಬೈನಲ್ಲಿ ಪತ್ನಿ ಅನುಷ್ಕಾ ಶರ್ಮ ಜತೆ ಲಾಕ್ ಆಗಿದ್ದಾರೆ. ಸದಾ ಕ್ರಿಕೆಟ್ನಲ್ಲಿ ಬ್ಯುಸಿಯಾಗಿರುತ್ತಿದ್ದ ಕೊಹ್ಲಿಗೆ ಲಾಕ್ಡೌನ್ನಿಂದ ಮುಂಬೈನಲ್ಲೇ ಕಾಲಕಳೆಯುವಂತಾಗಿದೆ. ಇದೀಗ ಐಪಿಎಲ್ಗೆ ದಿನಾಂಕ ಘೋಷಣೆಯಾಗಿರುವುದು ಕೊಂಚ ಸಮಾಧಾನ ತರಿಸಿದೆ. ಲಾಕ್ಡೌನ್ನಲ್ಲೇ ಅನುಷ್ಕಾ ಶರ್ಮ ಬರ್ತ್ ಡೇಗೆ ಕೊಹ್ಲಿ ವಿಶೇಷ ಕೇಕ್ ತಯಾರಿಸಿದರಂತೆ. ಬಿಸಿಸಿಐ ಟ್ವಿಟರ್ಗಾಗಿ ಕನ್ನಡಿಗ ಮಯಾಂಕ್ ಅಗರ್ವಾಲ್ ಜತೆ ನಡೆಸಿದ ಮಾತುಕತೆಯಲ್ಲಿ ಕೊಹ್ಲಿ, ಪತ್ನಿ ಬರ್ತ್ ಡೇ ಸೆಲೆಬ್ರೇಷನ್ ಕುರಿತು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಐಪಿಎಲ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಅನುಮಾನ ?
ಲಾಕ್ಡೌನ್ನಿಂದಾಗಿ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಉಳಿದಿರುವ ಕೊಹ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ದೈನಂದಿನ ಚಟುವಟಿಕೆಗಳ ಕುರಿತು ಕೊಹ್ಲಿ ಇನ್ಸ್ಟಾಗ್ರಾಂ, ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಮೇ 1 ರಂದು ನಡೆದ ಅನುಷ್ಕಾ ಶರ್ಮ ಬರ್ತ್ ಡೇಗೆ ಖುದ್ದು ಕೊಹ್ಲಿಯೇ ಕೇಕ್ ತಯಾರಿಸಿದರಂತೆ. ಲಾಕ್ಡೌನ್ ವೇಳೆ ಮರೆಯಲಾಗದ ಘಟನೆ ಯಾವುದು ಎಂಬ ಮಯಾಂಕ್ ಪ್ರಶ್ನೆಗೆ ಕೊಹ್ಲಿ, ಪತ್ನಿ ಬರ್ತ್ ಡೇಗೆ ಕೇಕ್ ತಯಾರಿಸಿದ ವಿಷಯ ಹೇಳಿಕೊಂಡಿದ್ದಾರೆ. ಅದಕ್ಕೂ ಮೊದಲು ಕೇಕ್ ತಯಾರಿಸಿರಲಿಲ್ಲ. ಮೊದಲ ಬಾರಿಗೆ ಕೇಕ್ ತಯಾರಿಸಿದೆ. ಆದರೂ ತುಂಬಾ ಚೆನ್ನಾಗಿತ್ತು. ಅನುಷ್ಕಾ ಕೂಡ ಕೇಕ್ ಇಷ್ಟಪಟ್ಟರು ಎಂದು ಕೊಹ್ಲಿ ಹೇಳಿದ್ದಾರೆ. ನನ್ನ ಪಾಲಿಗೆ ಅದೊಂದು ವಿಶೇಷವಾಗಿತ್ತು ಎಂದಿದ್ದಾರೆ.
ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ದೈಹಿಕ ಕಸರತ್ತಿನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಹಾದಿರ್ಕ್ ಪಾಂಡ್ಯ ಹಾಕಿದ್ದ ಹೋಪ್-ಪುಷ್ ಚಾಲೆಂಜ್ಗೂ ಸೈ ಎಂದಿದ್ದರು. ಆಟಗಾರರ ಕೇಂದ್ರ ಗುತ್ತಿಗೆಯಲ್ಲಿ ಎ-ಪ್ಲಸ್ ಶ್ರೇಷ್ಠ ಹೊಂದಿರುವ ಮೂರು ಆಟಗಾರರ ಪೈಕಿ ಕೊಹ್ಲಿ ಕೂಡ ಒಬ್ಬರು. ಆಗಸ್ಟ್ ತಿಂಗಳಲ್ಲಿ ಬಿಸಿಸಿಐ ಅಹಮದಾಬಾದ್ನಲ್ಲಿ ಆಟಗಾರರಿಗೆ ತರಬೇತಿ ಶಿಬಿರ ಆಯೋಜಿಸುತ್ತಿದೆ. ಬಳಿಕ ಆಟಗಾರರು ಯುಎಇಗೆ ಐಪಿಎಲ್ ಆಡಲಿ ತೆರಳಲಿದ್ದಾರೆ. ಐಪಿಎಲ್ ಮುಕ್ತಾಯದ ಬಳಿಕ ಭಾರತ ತಂಡ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಆಡಲು ಆಸ್ಟ್ರೆಲಿಯಾಗೆ ಪ್ರಯಾಣ ಬೆಳೆಸಲಿದೆ.