VIDEO: ಮಗನನ್ನು ನೋಡಿ ನೀನು ಏನೂ ತಿನ್ನಲ್ವ ಎಂದು ವಿರಾಟ್ ತಾಯಿ ಕೇಳೋದ್ಯಾಕೆ..?

virat kohli with her mom
Published on

ಬೆಂಗಳೂರು: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುವ ಕ್ರಿಕೆಟಿಗ. ವಿಶ್ವ ಕ್ರಿಕೆಟ್‌ನಲ್ಲೇ ಸದ್ಯ ಅವರಷ್ಟು ಫಿಟ್ನೆಸ್ ಕಾಯ್ದುಕೊಳ್ಳುವ ಕ್ರಿಕೆಟಿಗ ಮತ್ತೊಬ್ಬರಿಲ್ಲ. ಭಾರತ ತಂಡದ ಮಾಜಿ ಟ್ರೇನರ್ ಶಂಕರ್ ಬಸು ಮಾರ್ಗದರ್ಶನದಲ್ಲಿ ಕೊಹ್ಲಿ ನಡೆಸುವ ದೈಹಿಕ ಕಸರತ್ತಿಗೆ ಬೆರಗಾದವರೇ ಇಲ್ಲ. ಸ್ವತಃ ಕೊಹ್ಲಿ ತಾಯಿಯೇ ಮಗನ ಫಿಟ್ನೆಸ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಅಧಿಕೃತ ಟ್ವಿಟರ್‌ನಲ್ಲಿ ಪ್ರಕಟಿಸಲಾಗಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ಕನ್ನಡಿಗ ಮಯಾಂಕ್ ಅಗರ್ವಾಲ್ ಜತೆ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಫಿಟ್ನೆಸ್ ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. ನನ್ನ ತಾಯಿ ಯಾವಾಗಲೂ ಹೇಳುತ್ತಿರುತ್ತಾರೆ, ತುಂಬಾ ವೀಕ್ ಆಗಿದ್ದೀಯಾ ಅಂತ. ಅವರ ಮಾತು ನನ್ನ ಪಾಲಿಗೆ ಸಾಮಾನ್ಯವಾಗಿದೆ. ಏನು ತಿನ್ನಲ್ವ ಎಂದು ಕೇಳುತ್ತಿರುತ್ತಾರೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ಕೊಹ್ಲಿ ಫಿಟ್ನೆಸ್, ದೈಹಿಕ ಕಸರತ್ತಿನ ಹಿಂದೆ ಶಂಕರ್ ಬಸು ಅವರ ಮಾರ್ಗದರ್ಶನವೇ ಪ್ರಮುಖವಂತೆ. ಭಾರತ ತಂಡದ ನಾಯಕ ಕೊಹ್ಲಿ ಫಿಟ್ನೆಸ್ ಲೆವೆಲ್‌ನಲ್ಲಿ ವಿಶ್ವ ನಂ.1 ಟೆನಿಸ್ ಆಟಗಾರ ಸೆರ್ಬಿಯಾದ ನೊವೊಕ್ ಜೋಕೊವಿಕ್ ಅವರನ್ನೇ ಹಿಂದಿಕ್ಕಿದ್ದಾರಂತೆ.

ಇತರ ಕ್ರಿಕೆಟಿಗರು ಫಿಟ್ನೆಸ್ ಕಾಯ್ದುಕೊಳ್ಳುವ ಸಲುವಾಗಿ ಕೊಹ್ಲಿ, 2017ರಲ್ಲಿ ರವಿ ಶಾಸ್ತ್ರಿ ಭಾರತ ತಂಡದ ಮುಖ್ಯಕೋಚ್ ಆದ ಮೇಲೆ ಕಡ್ಡಾಯವಾಗಿ ಯೊ ಯೊ ಟೆಸ್ಟ್ ಜಾರಿಗೆ ತಂದರು. ಇದರಿಂದಾಗಿಯೇ ಹಿರಿಯ ಕ್ರಿಕೆಟಿಗರಾದ ಸುರೇಶ್ ರೈನಾ, ಯುವರಾಜ್ ಸಿಂಗ್ ತಂಡದಿಂದ ಹೊರ ಬೀಳಬೇಕಾಯಿತು. ಬಳಿಕ 2019ರಲ್ಲಿ ಯುವರಾಜ್ ಸಿಂಗ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಟೆಸ್ಟ್ ಫೇಲ್ ಆಗಿದ್ದರೂ ಶಮಿ ಸತತ ಯತ್ನಗಳ ಲವಾಗಿ ತಂಡಕ್ಕೆ ವಾಪಸಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net