ವಿರಾಟ್ ಕೊಹ್ಲಿ T-20 ರ‍್ಯಾಂಕಿಂಗ್​ನಲ್ಲಿ ಏರಿಕೆ; 29 ರಿಂದ 15ನೇ ಸ್ಥಾನಕ್ಕೆ ಜಿಗಿತ

454646
Published on

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಏಷ್ಯಾಕಪ್​ ಪಂದ್ಯದಲ್ಲಿ 122 ರನ್​ ಗಳಿಸುವ ಮೂಲಕ ಮೂರು ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಶತಕ ದಾಖಲಿಸಿಕೊಂಡಿದ್ದು ಗೊತ್ತೇ ಇದೆ. ಇದೀಗ ವಿರಾಟ್ ಕೊಹ್ಲಿ ಟಿ-20 ರ‍್ಯಾಂಕಿಂಗ್​ನಲ್ಲಿ 599 ಅಂಕಗಳೊಂದಿಗೆ 29 ನೇ ಸ್ಥಾನದಿಂದ 15ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಬ್ಯಾಟಿಂದ ಯಾವುದೇ ಶತಕ ದಾಖಲಾಗಿರಲಿಲ್ಲ. ಇದೇ ಕಾರಣಕ್ಕೆ ಸಾಕಷ್ಟು ಟೀಕೆಗಳನ್ನು ಕೂಡ ಎದುರಿಸಿದ್ದರು. ಇದಕ್ಕೆ ಉತ್ತರವಾಗಿ 33 ವರ್ಷದ ಕೊಹ್ಲಿ ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್​ ಸರಣಿಯಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕದ ಸಹಾಯದಿಂದ 276 ರನ್ ಗಳಿಸಿದ್ದರು. ಇದರೊಂದಿಗೆ ಎರಡನೇ ಅತ್ಯಧಿಕ ರನ್​​ ಸ್ಕೋರ್ ದಾಖಲಿಸಿದ್ದರು.

ವಿರಾಟ್​​ ಕೊಹ್ಲಿ ಇದುವರೆಗೆ 104 ಟಿ-20 ಪಂದ್ಯಗಳನ್ನು ಆಡಿದ್ದು, 51.94 ಸರಾಸರಿಯಲ್ಲಿ 3584 ರನ್ ದಾಖಲಿಸಿದ್ದಾರೆ. ಇತ್ತೀಚೆಗೆ ಅಪ್ಘಾನಿಸ್ತಾನ ವಿರುದ್ಧ 122 ರನ್ ಸಿಡಿಸುವ ಮೂಲಕ ಟಿ-20ಯಲ್ಲಿ ಮೊದಲ ಶತಕ ಪೂರೈಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net