

ನವದೆಹಲಿ: 2022ರ ಟಿ-20 ವಿಶ್ವಕಪ್ ಜಯಿಸುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ. ನಿನ್ನೆಯಷ್ಟೇ ಮಕ್ತಾಯಕಂಡ ಚುಟುಕು ಕ್ರಿಕೆಟ್ ಸಮರದಲ್ಲಿ ವಿರಾಟ್ ಕೊಹ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ. ಈ ವಿಶ್ವಕಪ್ನಲ್ಲಿ 6 ಪಂದ್ಯಗಳನ್ನಾಡಿರುವ ಕೊಹ್ಲಿ 98.66ರ ಸರಾಸರಿಯಲ್ಲಿ 296 ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಇಡೀ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿದವರಲ್ಲಿ ಕೊಹ್ಲಿಗೆ ಮೊದಲ ಸ್ಥಾನ. ಈ ಮೂಲಕ ಎರಡು ಬಾರಿ ಟಿ-20 ವಿಶ್ವಕಪ್ನಲ್ಲಿ ಅತೀ ಹೆಚ್ಚು ರನ್ ಕೆಲೆಹಾಕಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿಯದ್ದು.
ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಎದುರಿಸಿತ್ತು. ಇನ್ನೇನು ಈ ಪಂದ್ಯವನ್ನು ಭಾರತ ಸೋತೇ ಬಿಡುತ್ತದೆ ಎಂಬ ಸಂದರ್ಭದಲ್ಲಿ ಪಂದ್ಯದ ಗತಿ ಬದಲಿಸಿದ್ದು ವಿರಾಟ್ ಕೊಹ್ಲಿಯ ಅದ್ಭುತ ಇನ್ನಿಂಗ್ಸ್. ಈ ಪಂದ್ಯದದ ಗೆಲುವಿನಲ್ಲಿ ಕೊಹ್ಲಿಯ ಇನ್ನಿಂಗ್ಸ್ ನಿರ್ಣಾಯಕವಾಗಿತ್ತು. 82 ರನ್ ಸಿಡಿಸಿ ಪಾಕಿಸ್ತಾನದ ಗೆಲುವನ್ನು ತನ್ನತ್ತು ಎಳೆದುಕೊಂಡರು. ಈ ಪಂದ್ಯದಲ್ಲಿ 82 ರನ್ ಗಳಿಸಿದ್ದು, ಇಡೀ ಟೂರ್ನಿಯಲ್ಲಿ ಕೊಹ್ಲಿಯ ಗರಿಷ್ಠ ರನ್. ಒಟ್ಟು 6 ಪಂದ್ಯಗಳಲ್ಲಿ 4 ಅರ್ಧಶತಕ ಸಿಡಿಸಿ ಮಿಂಚಿದರು.
ವಿರಾಟ್ ಕೊಹ್ಲಿ 2014ರ ಟಿ-20 ವಿಶ್ವಕಪ್ನಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿ, ಬ್ಯಾಟಿಂಗ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಅಂದು ಆರು ಇನ್ನಿಂಗ್ಸ್ನಲ್ಲಿ 106.33ರ ಸರಾಸರಿಯಲ್ಲಿ ಕೊಹ್ಲಿ ಗಳಿಸಿದ್ದು 319 ರನ್. 2014ರಲ್ಲೂ ನಾಲ್ಕು ಅರ್ಧಶತಕ ಕೊಹ್ಲಿ ಬ್ಯಾಟಿಂಗ್ ಸಿಡಿದಿದ್ದವು.
ವಿರಾಟ್ ಕೊಹ್ಲಿ ಒಟ್ಟು 1141 ರನ್ ಕಲೆ ಹಾಕಿ, ಟಿ-20 ವಿಶ್ವಕಪ್ನಲ್ಲಿ ಅತೀ ಹೆಚ್ಚು ರನ್ ಗಳಿಕೆ ಮಾಡಿದ ಆಟಗಾಋ ಎನಿಸಿಕೊಂಡಿದ್ದಾರೆ. ಇದುವರೆಗೂ 27 ಟಿ-20 ವಿಶ್ವಕಪ್ ಪಂದ್ಯಗಳನ್ನಾಡಿರುವ ವಿರಾಟ್, 14 ಅರ್ಧ ಶತಕ ಸಿಡಿಸಿದ್ದಾರೆ.(ಏಜೆನ್ಸೀಸ್)