

ಮೆಲ್ಬೋರ್ನ್: ಭಾರತ ತಂಡ 2 ಬ್ಯಾಚ್ಗಳಲ್ಲಿ ಭಾನುವಾರ ಮತ್ತು ಸೋಮವಾರ ಆಸೀಸ್ಗೆ ಪ್ರಯಾಣಿಸಿರುವ ನಡುವೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭಾನುವಾರ ಸಂಜೆಯೇ ಅಡಿಲೇಡ್ ತಲುಪಿದ್ದಾರೆ. ಇದರೊಂದಿಗೆ ಹಾಲಿ ಪ್ರವಾಸದಲ್ಲಿ ಮೊದಲಿಗರಾಗಿ ಆಸೀಸ್ ತಲುಪಿದ ಭಾರತ ತಂಡದ ಸದಸ್ಯರಾಗಿದ್ದಾರೆ.
ಶುಭಮಾನ್ ಗಿಲ್, ಮೊಹಮದ್ ಸಿರಾಜ್, ಆಕಾಶ್ದೀಪ್, ವಾಷಿಂಗ್ಟನ್ ಸುಂದರ್, ಯಶಸ್ವಿ ಜೈಸ್ವಾಲ್, ಸಹಾಯಕ ಕೋಚ್ ಅಭಿಷೇಕ್ ನಾಯರ್ ಭಾನುವಾರ ರಾತ್ರಿ ಮೊದಲ ಬ್ಯಾಚ್ನಲ್ಲಿ ಸಿಂಗಾಪುರ ಮೂಲಕವಾಗಿ ಪರ್ತ್ಗೆ ತೆರಳಿದರೆ, ನಾಯಕ ರೋಹಿತ್ ಶರ್ಮ ಹೊರತಾಗಿ ಇತರರು ಕೋಚ್ ಗಂಭೀರ್ ಸುದ್ದಿಗೋಷ್ಠಿ ಮುಗಿಸಿದ ಬಳಿಕ ಸೋಮವಾರ ಮಧ್ಯಾಹ್ನ ಆಸೀಸ್ಗೆ ವಿಮಾನ ಏರಿದರು.
ಉಪನಾಯಕ ಜಸ್ಪ್ರೀತ್ ಬುಮ್ರಾ ಸ್ವಲ್ಪ ತಡವಾಗಿ ಸೋಮವಾರ ರಾತ್ರಿ ಆಸೀಸ್ಗೆ ಪ್ರಯಾಣಿಸಿದರು. ಅಭಿಮನ್ಯು ಈಶ್ವರನ್ ಮತ್ತು ಕೆಎಲ್ ರಾಹುಲ್ ಭಾರತ ಎ ತಂಡದೊಂದಿಗೆ ಈಗಾಗಲೆ ಆಸೀಸ್ ನೆಲದಲ್ಲಿದ್ದಾರೆ.