ಕೊಹ್ಲಿ ತಾನೊಬ್ಬ ಅದ್ಭುತ ಆಟಗಾರ ಎನ್ನುವುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ...

Kohli (1)
Published on

ನವದೆಹಲಿ: ಪಾಕಿಸ್ತಾನ ವಿರುದ್ಧದ ಟಿ-20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಅಜೇಯ 82 ರನ್​ ಗಳಿಸಿ ತಾನೊಬ್ಬ ಮ್ಯಾಚ್ ವಿನ್ನಿಂಗ್ ಆಟಗಾರ ಎಂಬುವುದನ್ನು ಮತ್ತೊಮ್ಮೆ ಸಾರಿ ಹೇಳಿದ ವಿರಾಟ್ ಕೊಹ್ಲಿಯನ್ನು ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ಹಾಡಿ ಹೊಗಳಿದ್ದಾರೆ.

ಮೆಲ್ಬೋರ್ನ್​ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಆರಂಭದಲ್ಲಿಯೇ ನಾಲ್ಕು ವಿಕೆಟ್ ಕಳೆದುಕೊಂಡು ಮುಗ್ಗರಿಸಿತ್ತು. ಈ ವೇಳೆ ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಿದ ಕೊಹ್ಲಿ, ಭಾರತಕ್ಕೆ ಜಯ ತಂದುಕೊಟ್ಟರು. ಈ ಪಂದ್ಯದ ಗೆಲುವು ಅದ್ಭುತವಾದ್ದು ಎಂದು ಹೇಳಿದ್ದಾರೆ.

ಕೊಹ್ಲಿಯ ಬ್ಯಾಟಿಂಗ್​ನ್ನು ನನಗೆ ಅರಿತುಕೊಳ್ಳಲು ಸಾದ್ಯವಾಗಿಲ್ಲ. ಈ ಪಂದ್ಯ ನನಗೆ ಕನಸಿನಂತೆ ಭಾಸವಾಯಿತು. ಆರಂಭದಲ್ಲಿ ಪಂದ್ಯದ ಗೆಲುವು ಪಾಕಿಸ್ತಾನದ ಕಡೆಗಿತ್ತು. ಆದರೆ ಕೊಹ್ಲಿಯ ಚೇಸಿಂಗ್​ನಿಂದಾಗಿ ಪಂದ್ಯ ಭಾರತದ್ದಾಯಿತು. ಕ್ರಿಕೆಟ್ ಪಂದ್ಯದಲ್ಲಿ ಪ್ರೇಕ್ಷಕರು ಏನನ್ನು ಬಯಸುತ್ತಾರೋ, ಅದು ಭಾರತ-ಪಾಕಿಸ್ತಾನ ನಡುವಣ ಪಂದ್ಯದಿಂದ ಲಭಿಸಿದೆ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net