

ನವದೆಹಲಿ: ಮುಂಬೈ ಸೆಂಟ್ರಲ್ ವಿಭಾಗದಿಂದ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, ಅತುಲ್ ಎಂಬ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ರೈಲು ಮುಂಬೈನಿಂದ ಗಾಂಧಿನಗರಕ್ಕೆ ಸಂಚರಿಸುತ್ತಿತ್ತು. ಈ ವೇಳೆ ದನಕರುಗಳು ಹಳಿಯಲ್ಲಿ ಅಡ್ಡ ಬಂದುದರಿಂದ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಅಪಘಾತದಿಂದ ಡ್ರೈವರ್ಕೋಚ್ನ ಮುಂಭಾಗಕ್ಕೆ ಹಾನಿಯಾಗಿದೆ. ಆದಷ್ಟು ಬೇಗ ಇದನ್ನು ಸರಿಪಡಿಸಲಾಗುವುದು. ಅಪಘಾತ ನಡೆದ 15 ನಿಮಿಷಗಳ ನಂತರ,ರೈಲು ಮತ್ತೆ ಗಾಂಧಿನಗರಕ್ಕೆ ಪ್ರಯಾಣ ಬೆಳೆಸಿದೆ. ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಭಾರತೀಯ ರೈಲ್ವೇ ತಿಳಿಸಿದೆ.
ಈ ಹಿಂದೆಯೂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಎಮ್ಮೆಯ ಹಿಂಡು ಡಿಕ್ಕಿಯಾಗಿ, ರೈಲಿಗೆ ಹಾನಿಯಾಗಿತ್ತು. ಹೀಗಾಗಿ ರೈಲ್ವೇ ಅಧಿಕಾರಿಗಳು ಈ ಭಾಗದ ರೈತರಲ್ಲಿ 'ನಿಮ್ಮ ದನಕರುಗಳನ್ನು ರೈಲ್ವೇ ಹಳಿ ಪ್ರದೇಶದಲ್ಲಿ ಮೇಯಲು ಬಿಡಬೇಡಿ' ಎಂದು ಮನವಿ ಮಾಡಿದ್ದರು. ಆದರೆ ಇದೀಗ ಮತ್ತೊಮ್ಮೆ ಸಾಕುಪ್ರಾಣಿಗಳ ಕಾರಣದಿಂದ ರೈಲಿಗೆ ಹಾನಿಯಾಗಿದೆ. (ಏಜೆನ್ಸೀಸ್)