ದೆಹಲಿ ರಣಜಿ ತಂಡದ ತರಬೇತುದಾರರಾಗಿ ವಿರಾಟ್ ಕೊಹ್ಲಿ ಬಾಲ್ಯದ ಕೋಚ್..!

virat kohli
Published on

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮ, 2020-21ನೇ ಸಾಲಿನ ದೇಶೀಯ ಕ್ರಿಕೆಟ್‌ನ ಋತುವಿಗೆ ದೆಹಲಿ ರಣಜಿ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮಾಜಿ ಆಟಗಾರನಾಗಿರುವ 55 ವರ್ಷದ ರಾಜ್‌ಕುಮಾರ್, ಕಳೆದ ವರ್ಷ ದೆಹಲಿ ತಂಡಕ್ಕೆ ಬೌಲಿಂಗ್ ಸಲಹೆಗಾರರಾಗಿದ್ದರು. ಈ ವೇಳೆ ಕೆಪಿ ಭಾಸ್ಕರ್ ತಂಡದ ಮುಖ್ಯಕೋಚ್ ಆಗಿದ್ದರು. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರೂ ಆಗಿರುವ ರಾಜ್‌ಕುಮಾರ್ ಶರ್ಮ, ಐಸಿಸಿ ಸಹಾಯಕ ಸದಸ್ಯತ್ವ ಹೊಂದಿರುವ ಮಾಲ್ಟಾ ತಂಡದ ಕೋಚ್ ಆಗಿದ್ದರು.

ರಾಜ್‌ಕುಮಾರ್ ಶರ್ಮ, ಮಾರ್ಗದರ್ಶನದಲ್ಲೇ 23 ವಯೋಮಿತಿ ದೆಹಲಿ ತಂಡ, ಸಿಕೆ ನಾಯುಡು ಟ್ರೋಫಿ ಗೆದ್ದುಕೊಂಡಿತ್ತು. ರಾಜ್‌ಕುಮಾರ್ ಅವರಿಗೆ ಭಾರತ ತಂಡದ ಮಾಜಿ ಆಟಗಾರ ಗುರುಶರಣ್‌ಸಿಂಗ್ ಅವರನ್ನು ಸಹಾಯಕ ಕೋಚ್ ಆಗಿ ನೇಮಿಸಲಾಗಿದೆ. ಮಾಜಿ ಆರಂಭಿಕ ಆಟಗಾರ ಅಶು ದಾನಿ ಅವರನ್ನು ಡೆಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಆಯ್ಕೆ ಸಮಿತಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net