More

    ದ್ರಾವಿಡ್ ಅವರನ್ನು ಕೂಡಲೆ ಆಸ್ಟ್ರೇಲಿಯಾಕ್ಕೆ ಕಳುಹಿಸಿ ಎಂದು ವೆಂಗ್ಸರ್ಕಾರ್ ಹೇಳಿದ್ದೇಕೆ?

    ಮುಂಬೈ: ಅಡಿಲೇಡ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ನಾಟಕೀಯ ಪತನದ ಬೆನ್ನಲ್ಲೇ ಮಾಜಿ ನಾಯಕ ದಿಲೀಪ್ ವೆಂಗ್ಸರ್ಕಾರ್ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಸಲಹೆಯೊಂದನ್ನು ನೀಡಿದ್ದಾರೆ. ಸದ್ಯ ಎನ್‌ಸಿಎ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ದಿಗ್ಗಜ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಅವರನ್ನು ಕೂಡಲೆ ಆಸ್ಟ್ರೇಲಿಯಾಕ್ಕೆ ಕಳುಹಿಸಬೇಕು ಮತ್ತು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಮಾರ್ಗದರ್ಶನ ನೀಡುವ ಹೊಣೆಯನ್ನು ವಹಿಸಬೇಕೆಂದು ವೆಂಗ್ಸರ್ಕಾರ್ ಹೇಳಿದ್ದಾರೆ.

    ಇದನ್ನೂ ಓದಿ: ಖೇಲೋ ಇಂಡಿಯಾ ಗೇಮ್ಸ್‌ಗೆ ಮಲ್ಲಕಂಬ ಸ್ಪರ್ಧೆ ಸೇರ್ಪಡೆ

    ‘ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಆಡಲು ದ್ರಾವಿಡ್ ಅವರಿಗಿಂತ ಉತ್ತಮವಾಗಿ ಬೇರೆ ಯಾರೂ ಮಾರ್ಗದರ್ಶನ ನೀಡಲಾರರು. ಅವರ ಉಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಲಾಭ ತಂದುಕೊಡಬಹುದು. ಕರೊನಾದಿಂದಾಗಿ ಎನ್‌ಸಿಎ ಕಳೆದ 9 ತಿಂಗಳಿನಿಂದ ಬಹುತೇಕ ಬಂದ್ ಆಗಿದೆ. ಹೀಗಾಗಿ ಅವರಿಗೆ ಈ ಹೊಣೆಯನ್ನು ವಹಿಸುವುದು ಉತ್ತಮ’ ಎಂದು ವೆಂಗ್ಸರ್ಕಾರ್ ಹೇಳಿದ್ದಾರೆ.

    ದ್ರಾವಿಡ್ ಕೂಡಲೆ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದರೆ, 14 ದಿನಗಳ ಕ್ವಾರಂಟೈನ್ ಅವಧಿಯನ್ನು ಮುಗಿಸಿದರೂ, 3ನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಭಾರತ ತಂಡದ ಮಾರ್ಗದರ್ಶನಕ್ಕೆ ಲಭ್ಯರಾಗಲಿದ್ದಾರೆ ಎಂದು ವೆಂಗ್ಸರ್ಕಾರ್ ಹೇಳಿದ್ದಾರೆ. ಮೂರನೇ ಟೆಸ್ಟ್ ಜನವರಿ 7ರಿಂದ ಸಿಡ್ನಿಯಲ್ಲಿ ನಡೆಯಲಿದೆ.

    ಎಲ್ಲ ಟೆಸ್ಟ್​ ಪಂದ್ಯಗಳಲ್ಲಿ ಪಿಂಕ್ ಬಾಲ್ ಬಳಸಿ ಎಂದು ಶೇನ್ ವಾರ್ನ್ ಹೇಳಿದ್ದೇಕೆ?

    ಭಾರತ ತಂಡ ಸೋತಿದ್ದಕ್ಕೆ ಮತ್ತೆ ಟ್ರೋಲ್ ಆದ ನಟಿ ಅನುಷ್ಕಾ ಶರ್ಮ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts