More

    ಎಲ್ಲ ಟೆಸ್ಟ್​ ಪಂದ್ಯಗಳಲ್ಲಿ ಪಿಂಕ್ ಬಾಲ್ ಬಳಸಿ ಎಂದು ಶೇನ್ ವಾರ್ನ್ ಹೇಳಿದ್ದೇಕೆ?

    ಅಡಿಲೇಡ್: ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲಿನಿಂದಲೂ ಆಡಲು ಬಳಸುವ ಚೆಂಡು ಕೆಂಪು ಬಣ್ಣದ್ದಾಗಿದೆ. ಅಹರ್ನಿಶಿ ಟೆಸ್ಟ್ ಪಂದ್ಯಗಳು ಆರಂಭಗೊಂಡ ಬಳಿಕ ಹೊನಲು ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣಿಸಬೇಕೆಂಬ ಕಾರಣಕ್ಕಾಗಿ ನಸುಗೆಂಪು (ಪಿಂಕ್) ಬಣ್ಣದ ಚೆಂಡು ಬಳಸಲಾಗುತ್ತಿದೆ. ಆದರೆ ಇನ್ನು ಮುಂದೆ ಎಲ್ಲ ರೀತಿಯ ಟೆಸ್ಟ್ ಪಂದ್ಯಗಳಲ್ಲೂ ಪಿಂಕ್ ಬಣ್ಣದ ಚೆಂಡನ್ನೇ ಬಳಸಬೇಕೆಂದು ಆಸ್ಟ್ರೇಲಿಯದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಒತ್ತಾಯಿಸಿದ್ದಾರೆ.

    ಶೇನ್ ವಾರ್ನ್ ಪ್ರಕಾರ ಕೆಂಪು ಬಣ್ಣದ ಚೆಂಡು ಬೌಲರ್‌ಗಳಿಗೆ ಯಾವುದೇ ರೀತಿಯ ನೆರವು ಒದಗಿಸುವುದಿಲ್ಲ. ಹೀಗಾಗಿ ಅದನ್ನು ಅವರು ‘ದರಿದ್ರ’ ಕೆಂಪು ಚೆಂಡು ಎಂದೂ ಕರೆದಿದ್ದಾರೆ.

    ಇದನ್ನೂ ಓದಿ: ಮೆಸ್ಸಿ, ರೊನಾಲ್ಡೊ ಅವರನ್ನು ಹಿಂದಿಕ್ಕಿ ಫಿಫಾ ಪ್ರಶಸ್ತಿ ಗೆದ್ದ ಪೋಲೆಂಡ್ ಆಟಗಾರ

    ‘ನಾನು ಕಳೆದ ಕೆಲ ವರ್ಷಗಳಿಂದ ಇದನ್ನು ಹೇಳುತ್ತ ಬಂದಿದ್ದೇನೆ. ಎಲ್ಲ ರೀತಿಯ ಟೆಸ್ಟ್ ಪಂದ್ಯಗಳಲ್ಲಿ ಪಿಂಕ್ ಚೆಂಡನ್ನು ಬಳಸಬೇಕೆಂದು ನನ್ನ ನಂಬಿಕೆಯಾಗಿದೆ. ಕೇವಲ ಅಹರ್ನಿಶಿ ಟೆಸ್ಟ್ ಪಂದ್ಯಗಳಿಗೆ ಇದು ಸೀಮಿತವಾಗಬಾರದು. ಪಿಂಕ್ ಬಣ್ಣದ ಚೆಂಡನ್ನು ಆಟಗಾರರು ಚೆನ್ನಾಗಿ ನೋಡಬಲ್ಲರು. ಪ್ರೇಕ್ಷಕರಿಗೂ ಅದು ಸ್ಪಷ್ಟವಾಗಿ ಕಾಣಿಸುತ್ತದೆ. ಟಿವಿಯಲ್ಲೂ ಕೆಂಪು ಬಣ್ಣದ ಚೆಂಡಿಗಿಂತ ಪಿಂಕ್ ಬಣ್ಣದ ಚೆಂಡು ಸ್ಪಷ್ಟವಾಗಿ ಕಾಣಿಸುತ್ತದೆ. ಹೀಗಾಗಿ ಪಿಂಕ್ ಬಣ್ಣದ ಚೆಂಡನ್ನು ಎಲ್ಲ ಕಡೆ ಯಾಕೆ ಬಳಸಬಾರದು’ ಎಂದು ಶೇನ್ ವಾರ್ನ್ ವಿವರಿಸಿದ್ದಾರೆ.

    ‘ಪಿಂಕ್ ಬಣ್ಣದ ಚೆಂಡು 60 ಓವರ್ ಬಳಿಕ ಸ್ವಲ್ಪ ಮೃದುವಾಗುತ್ತದೆ. ಹೀಗಾಗಿ ಆಗ ಅದನ್ನು ಬದಲಾಯಿಸಬಹುದು. ಆದರೆ ಕೆಂಪು ಚೆಂಡು 25 ಓವರ್ ಬಳಿಕವೇ ಮೃದುವಾಗಿರುತ್ತದೆ’ ಎಂದೂ ವಾರ್ನ್ ತಿಳಿಸಿದ್ದಾರೆ. 51 ವರ್ಷದ ಅವರು 145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್ ಕಬಳಿಸಿದ್ದಾರೆ. ಆದರೆ ಅವರು ವೃತ್ತಿಜೀವನದಲ್ಲಿ ಎಂದೂ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆಡಿರಲಿಲ್ಲ. ಎಲ್ಲ ಪಂದ್ಯಗಳನ್ನು ಕೆಂಪು ಚೆಂಡಿನಲ್ಲಿಯೇ ಆಡಿದ್ದರು.

    ಇದನ್ನೂ ಓದಿ: ಕರೊನಾ ಹಾವಳಿಯಿಂದಾಗಿ ಮತ್ತೊಂದು ಕ್ರೀಡಾ ಲೀಗ್ ಮುಂದೂಡಿಕೆ

    ಕೆಂಪು ಬಣ್ಣದ ಚೆಂಡು ಹೆಚ್ಚು ಸ್ವಿಂಗ್ ಆಗುವುದಿಲ್ಲ. ಇಂಗ್ಲೆಂಡ್‌ನಲ್ಲಿ ಬಳಸುವ ಡ್ಯೂಕ್ ಚೆಂಡುಗಳಷ್ಟೇ ಸ್ವಿಂಗ್ ಆಗುತ್ತವೆ. ಉಳಿದೆಲ್ಲ ಕೆಂಪು ಚೆಂಡುಗಳು ದರಿದ್ರವಾಗಿವೆ. ಪಿಂಕ್ ಬಣ್ಣದ ಚೆಂಡುಗಳು ಕೆಂಪು ಚೆಂಡಿಗಿಂತ ಕೆಟ್ಟದಾಗಿರಲು ಸಾಧ್ಯವಿಲ್ಲ. ಹೀಗಾಗಿ ಎಲ್ಲ ಟೆಸ್ಟ್‌ಗಳಲ್ಲಿ ಪಿಂಕ್ ಚೆಂಡು ಬಳಸುವುದು ಉತ್ತಮ ಎಂದು ವಾರ್ನ್ ಭಾರತ-ಆಸ್ಟ್ರೇಲಿಯಾ ನಡುವಿನ ಅಹರ್ನಿಶಿ ಟೆಸ್ಟ್ ಪಂದ್ಯದ ವೇಳೆ ಅಭಿಪ್ರಾಯಪಟ್ಟಿದ್ದಾರೆ.

    ಸತತ ವೈಫಲ್ಯದಿಂದ ಭಾರಿ ಟ್ರೋಲ್‌ಗೆ ಒಳಗಾದ ಪೃಥ್ವಿ ಷಾ

    ಯೋಗಾಸನ ಇನ್ನು ಸ್ಪರ್ಧಾತ್ಮಕ ಕ್ರೀಡೆ, ಯೋಗಪಟುಗಳಿಗೆ ಏನೇನು ಲಾಭವಿದೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts