More

    ಪರರ ಹಿತ ಬಯಸಿದರೆ ಆತ್ಮಕಲ್ಯಾಣ

    ಯರಗಟ್ಟಿ: ಪರಮಾತ್ಮನ ಅನುಗ್ರಹ ದೊರೆಯಲು ಮಾನವ ಸದಾಚಾರ ಸಂಪನ್ನನಾಗಿ ಸನ್ಮಾರ್ಗದಲ್ಲಿ ನಡೆಯಬೇಕು. ನಶ್ವರವಾದ ಈ ಬದುಕನ್ನು ಪರಹಿತಕ್ಕಾಗಿಯೇ ಮುಡಿಪಾಗಿಡಬೇಕು ಎಂದು ಇಂಚಲ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

    ಪಟ್ಟಣದ ರಾಜರಾಜೇಶ್ವರಿ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶೇಷ ವೇದಾಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಶ್ರೇಷ್ಠ ತತ್ವಜ್ಞಾನಿಗಳಾದ ಶಿವಯೋಗಿಗಳು ಕೆಡುವ ಶರೀರದ ಸಲವಾವುದು ಪರಹಿತ ಎಂದು ನುಡಿದಿದ್ದಾರೆ. ಅಖಂಡ ರಾಷ್ಟ್ರದಲ್ಲಿ ಮತ್ತು ಸಮಸ್ತ ಪಥ್ವಿಯಲ್ಲಿ ಸರ್ವರೂ ಸುಖಿಗಳಾಗಬೇಕು ಎನ್ನುವ ಆಶಯ ವಿಶ್ವತೋಮುಖವಾದದ್ದು. ಅದು ಜನಪರ ನೀತಿ ಸಂಹಿತೆ. ಪ್ರತಿಯೊಬ್ಬರೂ ಯಾವಾಗಲೂ ಸುಖಿಗಳಾಗಿರಬೇಕು ಎಂದರು.

    ಎಲ್ಲರಲ್ಲಿಯೂ ದೋಷ&ದುರ್ಗುಣಗಳು ನಾಶವಾಗಬೇಕು. ಸರ್ವರಿಗೂ ಶುಭವಾಗಬೇಕು; ಮಂಗಳವಾಗಬೇಕು. ಎಲ್ಲರೂ ಪರಸ್ಪರ ಉಪಕಾರ ಮಾಡಬೇಕು. ಇಂತಹ ಉತಷ್ಟ ಭಾವನೆಗಳೇ ಮನುಷ್ಯನನ್ನು ದೈವತ್ವಕ್ಕೆ ಕರೆದೊಯ್ಯುತ್ತದೆ. ಈ ಪರೋಪಕಾರ ಭಾವನೆಯನ್ನು ಎಲ್ಲರೂ ತಮ್ಮೊಳಗೆ ಬೆಳೆಸಿಕೊಂಡಲ್ಲಿ ಜಗತ್ತು ಹೆಚ್ಚು ಸುಖ, ಸಂತೋಷ ಮತ್ತು ಶಾಂತಿಯಿಂದ ನೆಲೆಸಲು ಸಾಧ್ಯವಾಗುತ್ತದೆ ಎಂದರು. ಮಲ್ಲಾಪುರದ ಚಿದಾನಂದ ಸ್ವಾಮೀಜಿ, ತೋಂಡಿಕಟ್ಟಿ ಅಭಿನವ ವೆಂಕಟೇಶ ಮಹಾರಾಜರು, ಸವಟಗಿ ನಿಂಗಯ್ಯ ಸ್ವಾಮೀಜಿ, ಪಿ.ಎಚ್​.ಪಾಟೀಲ, ರಾಜೇಂದ್ರ ಶೆಟ್ಟಿ, ರಾಜೇಂದ್ರ ವಾಲಿ, ಸೋಮನಗೌಡ ದ್ಯಾಮನಗೌಡ್ರ, ರಾಜೇಂದ್ರ ಅಕ್ಕಿ, ವಿದ್ಯಾಧಿರ ಕಲಾಪುರಿ, ಚಿದಂಬರ ಕದಂ, ಡಾ.ವೃಷಭೇಂದ್ರ ಪಟ್ಟಣ, ಜಗದೀಶ ಬಡಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts