More

    ಮೆಸ್ಸಿ, ರೊನಾಲ್ಡೊ ಅವರನ್ನು ಹಿಂದಿಕ್ಕಿ ಫಿಫಾ ಪ್ರಶಸ್ತಿ ಗೆದ್ದ ಪೋಲೆಂಡ್ ಆಟಗಾರ

    ಜೆನೆವಾ: ಪೋಲೆಂಡ್ ಫುಟ್‌ಬಾಲ್ ತಂಡದ ನಾಯಕ ರಾಬರ್ಟ್ ಲೆವಾಂಡೋವ್‌ಸ್ಕಿ 2020ರ ಸಾಲಿನ ಫಿಫಾ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಮತ್ತು ಪೋರ್ಚುಗಲ್‌ನ ಕ್ರಿಶ್ಚಿಯಾನೊ ರೊನಾಲ್ಡೊ ಅವರ ಸ್ಪರ್ಧೆಯನ್ನು ಹಿಮ್ಮೆಟ್ಟಿಸಿ ಲೆವಾಂಡೋವ್‌ಸ್ಕಿ ಈ ಸಾಧನೆ ಮಾಡಿದ್ದಾರೆ.

    ಕಳೆದ ಋತುವಿನಲ್ಲಿ ಬೇಯರ್ನ್ ಮ್ಯೂನಿಚ್ ಪರ 55 ಗೋಲು ಸಿಡಿಸಿ ಹಲವು ಪ್ರಶಸ್ತಿ ಗೆಲುವಿಗೆ ನೆರವಾದ ಕಾರಣದಿಂದ 32 ವರ್ಷದ ಲೆವಾಂಡೋವ್‌ಸ್ಕಿಗೆ ಈ ಪ್ರಶಸ್ತಿ ಒಲಿದಿದೆ. ಜ್ಯೂರಿಚ್‌ನಿಂದ ವರ್ಚುವಲ್ ಮೂಲಕ ಸಮಾರಂಭ ನಡೆದರೂ, ಫಿಫಾ ಅಧ್ಯಕ್ಷ ಗಿಯಾನಿ ಇನ್​ಫಾಂಟಿನೊ ಮ್ಯೂನಿಚ್‌ಗೆ ತೆರಳಿ ಲೆವಾಂಡೋವ್‌ಸ್ಕಿಗೆ ಪ್ರಶಸ್ತಿ ಪ್ರದಾನ ಮಾಡಿದರು.

    ಲೆವಾಂಡೋವ್‌ಸ್ಕಿ ಕಳೆದ 13 ವರ್ಷಗಳಲ್ಲಿ ಮೆಸ್ಸಿ-ರೊನಾಲ್ಡೊ ಹೊರತಾಗಿ ಈ ಪ್ರಶಸ್ತಿ ಜಯಿಸಿದ 2ನೇ ಆಟಗಾರರೆನಿಸಿದ್ದಾರೆ. 2018ರಲ್ಲಿ ಕ್ರೊವೇಷಿಯಾದ ಲುಕಾ ಮಾಡ್ರಿಕ್ ಈ ಸಾಧನೆ ಮಾಡಿದ ಮೊದಲಿಗರಾಗಿದ್ದರು.

    ಇದನ್ನೂ ಓದಿ: ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ ನ್ಯೂಜಿಲೆಂಡ್

    ಮ್ಯಾಂಚೆಸ್ಟರ್ ಸಿಟಿ ಡಿಫೆಂಡರ್ ಲುಸಿ ಬ್ರೌಂಜ್ ಮಹಿಳೆಯರ ವಿಭಾಗದಲ್ಲಿ ವರ್ಷದ ಗೌರವ ಪಡೆದರು. ಇಂಗ್ಲೆಂಡ್‌ಗೆ ಇದು ಮೊದಲ ವೈಯಕ್ತಿಕ ಫಿಫಾ ಪ್ರಶಸ್ತಿ ಗೆಲುವಾಗಿದೆ. ಲಿವರ್‌ಪೂಲ್‌ನ ಜರ್ಗೆನ್ ಕ್ಲಾಪ್ ಸತತ 2ನೇ ಬಾರಿ ವರ್ಷದ ಕೋಚ್ ಪ್ರಶಸ್ತಿಗೆ ಭಾಜನರಾದರು. ನೆದರ್ಲೆಂಡ್‌ನ ಸರಿನಾ ವೀಗ್‌ಮನ್ ಮಹಿಳೆಯರ ವಿಭಾಗದಲ್ಲಿ ವರ್ಷಗ ಕೋಚ್ ಗೌರವ ಪಡೆದರು.

    ಎಲ್ಲ ರಾಷ್ಟ್ರೀಯ ತಂಡಗಳ ನಾಯಕರು, ಮುಖ್ಯ ಕೋಚ್, ಮಾಧ್ಯಮ ಪ್ರತಿನಿಧಿಗಳು, ಅಭಿಮಾನಿಗಳ ಆನ್‌ಲೈನ್ ಮತದಾನ ಪ್ರಕ್ರಿಯೆಯ ಮೂಲಕ ಪ್ರಶಸ್ತಿ ವಿಜೇತರನ್ನು ಆರಿಸಲಾಗಿದೆ.

    ಸತತ ವೈಫಲ್ಯದಿಂದ ಭಾರಿ ಟ್ರೋಲ್‌ಗೆ ಒಳಗಾದ ಪೃಥ್ವಿ ಷಾ

    ಯೋಗಾಸನ ಇನ್ನು ಸ್ಪರ್ಧಾತ್ಮಕ ಕ್ರೀಡೆ, ಯೋಗಪಟುಗಳಿಗೆ ಏನೇನು ಲಾಭವಿದೆ ಗೊತ್ತೇ?

    ಬೆಂಗಳೂರಿನಲ್ಲಿ ನಡೆಯಲಿವೆ ಮುಷ್ತಾಕ್ ಟಿ20 ಪಂದ್ಯಗಳು, ಕರ್ನಾಟಕ ತಂಡ ಯಾವ ಗುಂಪಿನಲ್ಲಿದೆ ಗೊತ್ತೇ?

    ಪಾಕ್ ಕ್ರಿಕೆಟ್ ಮಂಡಳಿಯಿಂದ ಕಿರುಕುಳ, 28ನೇ ವಯಸ್ಸಲ್ಲೇ ವೇಗಿ ಆಮೀರ್ ವಿದಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts