

Virat Kohli: ದುಬೈನ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಮಂಗಳವಾರ(ಮಾ.4) ನಡೆದ ಚಾಂಪಿಯನ್ಸ್ ಟ್ರೋಫಿ 2025 ನಾಕೌಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇನ್ನು ಗೆಲುವು ಸಾಧಿಸಿದ ಬಳಿಕ ರನ್ ಮಿಷನ್ ವಿರಾಟ್ ಕೊಹ್ಲಿ, ಪತ್ನಿಯೊಂದಿಗೆ ಗೆಲುವಿನ ಖುಷಿ ಹಂಚಿಕೊಂಡ ವಿಡಿಯೋವೊಂದು ಸಖತ್ ವೈರಲ್ ಆಗಿದೆ.
ಹೌದು, ಪಂದ್ಯದ ನಂತರ ಕೊಹ್ಲಿ ಅವರ ಸಂತೋಷದಿಂದ ಕುಣಿದಾಡಿದರು ಈ ಮೂಲಕ ಅವರ ಮುಖದಲ್ಲಿ ಮಂದಹಾಸ ಮತ್ತು ಉತ್ಸಾಹದಿಂದ ತುಂಬಿತ್ತು. ಅಲ್ಲದೆ, ವಿರಾಟ್ರ ಖುಷಿಯನ್ನು ಅವರ ಪತ್ನಿ ಅನುಷ್ಕಾ ಶರ್ಮಾ ಹೆಮ್ಮೆ ಮತ್ತು ಉತ್ಸಾಹದಿಂದ ಸ್ಟ್ಯಾಂಡ್‌ನಿಂದ ವೀಕ್ಷಿಸಿದರು.
ಕೊಹ್ಲಿ ಭಾರತವನ್ನು ಫೈನಲ್‌ಗೆ ಮುನ್ನಡೆಸಿದ ಸಂದರ್ಭದಲ್ಲಿ ದಂಪತಿಗಳು ವಿಶೇಷ ಕ್ಷಣವನ್ನು ಹಂಚಿಕೊಂಡರು. ಈ ವಿಜಯೋತ್ಸವವು ಅನುಷ್ಕಾ ಅವರೊಂದಿಗಿನ ಬಾಂಧವ್ಯವನ್ನು ಎತ್ತಿ ತೋರಿಸಿತು. ಅದು ಸಹ ನಾವು ಗೆದ್ವಿ ಅನುಷ್ಕಾ ಎಂಬ ಹಾವಭಾವ ಪ್ರದರ್ಶಿಸುವ ಮೂಲಕ ಎಂಬುದು ವಿಶೇಷ. ಇದೀಗ ಕಿಂಗ್ ಕೊಹ್ಲಿಯ ಈ ಸಂಭ್ರಮದ ವಿಡಿಯೋ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ತಂಡ 265 ರನ್‌ಗಳ ಗುರಿಯನ್ನು ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ತಲುಪಿತು. 36 ವರ್ಷದ ಕೊಹ್ಲಿ 98 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 84 ರನ್ ಗಳಿಸಿದರು. ಈ ಮೂಲಕ ಟೀಮ್ ಇಂಡಿಯಾ ಫೈನಲ್‌ಗೆ ತಪುಪಿದ್ದು, ಇದೇ ಮಾ.9ರಂದು ನಡೆಯಲಿದೆ.(ಏಜೆನ್ಸೀಸ್)