ಮತ್ತೊಂದು ದಾಖಲೆಯ ಸನಿಹದಲ್ಲಿ ವಿರಾಟ್ ಕೊಹ್ಲಿ; ಯಾವುದು ಆ ದಾಖಲೆ?

Kohli (3)
Published on

ನವದೆಹಲಿ: ಟೀಂ ಇಂಡಿಯಾದ ಸ್ವಾರ್​ ಬ್ಯಾಟ್ಸ್​​ಮನ್ ಮತ್ತೊಂದು ಹೊಸ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ, ಇದೀಗ ಸೌತ್​​ಆಫ್ರಿಕಾ ತಂಡವನ್ನು ಎದುರಿಸಲು ಸಜ್ಜಾಗಿದೆ.

ಮೊದಲು ಎರಡು ಪಂದ್ಯಗಳನ್ನು ಗೆದ್ದಿರುವ ರೋಹಿತ್​ ಶರ್ಮಾ ಪಡೆ, ಹ್ಯಾಟ್ರಿಕ್ ಗೆಲುವಿನ ಹೊಸ್ತಿಲಲ್ಲಿದೆ. ಇದೇ ವೇಳೆ ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಮತ್ತೊಂದು ದಾಖಲೆಯನ್ನು ಸೇರ್ಪಡೆಗೊಳಿಸುವ ಉತ್ಸಾಹದಲ್ಲಿದ್ದಾರೆ. ಆಡಿರುವ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿರುವ ಕೊಹ್ಲಿ, ತಮ್ಮ ಫಾರ್ಮ್​​ ಮುಂದುವರಿಸುವ ತಯಾರಿಯಲ್ಲಿದ್ದಾರೆ.

ಇದೀಗ ಟಿ-20 ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿಯ ದಾಖಲೆಯ ಪಟ್ಟಿ ಬೆಳೆಯುತ್ತಿದೆ. ವಿರಾಟ್ ಕೊಹ್ಲಿಯ ಮುಂದಿರುವ ಹೊಸ ದಾಖಲೆ, ರನ್​ ಗಳಿಕೆಯದ್ದು. ಕೊಹ್ಲಿ ಈವರೆಗೆ ಒಟ್ಟು 23 ಟಿ-20 ವಿಶ್ವಕಪ್ ಪಂದ್ಯಗಳನ್ನಾಡಿ 989 ರನ್ ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಕೊಹ್ಲಿ 11 ರನ್​ ಗಳಿಸಿದರೆ ಭಾರತದ ಪರ ಟಿ-20 ಕ್ರಿಕೆಟ್​ನಲ್ಲಿ 1000 ರನ್ ಕಲೆ ಹಾಕಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.

ಶ್ರೀಲಂಕಾದ ಮಾಜಿ ಕ್ರಿಕೆಟಿಗೆ ಮಹೇಲ ಜಯವರ್ಧನೆ ಸದ್ಯ ಟಿ-20 ವಿಶ್ವಕಪ್​ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಕ್ರಿಕೆಟಿಗ. 31 ಪಂದ್ಯಗಳನ್ನಾಡಿ, 1016 ರನ್ ಒಟ್ಟುಗೂಡಿಸಿದ್ದಾರೆ. ಕೊಹ್ಲಿ 28 ರನ್ ಕಲೆ ಹಾಕಿದಲ್ಲಿ, ಜಯವರ್ಧನೆ ದಾಖಲೆ ಹಿಂದೆ ಸರಿಯಲಿದೆ. ಆ ಮೂಲಕ ವಿರಾಟ್ ಟಿ-20 ವಿಶ್ವಕಪ್​ನಲ್ಲಿ ಅತೀ ಹೆಚ್ಚಿನ ರನ್ ಕಲೆ ಹಾಕಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net