ಸಮರವಿಕ್ರಮ ಕ್ಯಾಚ್​ ಹಿಡಿದ 'ಕಿಂಗ್' ಕೊಹ್ಲಿ! ಮೈದಾನದಲ್ಲೇ ಸಖತ್ ಸ್ಟೆಪ್ಸ್​,​ ವಿಡಿಯೋ ವೈರಲ್

ವಿಜಯವಾಣಿ - 2024-08-04T190728.994
Published on

ಕೊಲಂಬೊ: ಪ್ರಸ್ತುತ ಅತಿಥೇಯ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕೈಗೊಂಡಿರುವ ಭಾರತ, ಇಂದು ಎರಡನೇ ಪಂದ್ಯದಲ್ಲಿ ಲಂಕಾ ಪಡೆಯನ್ನು ಮಣಿಸಲು ಭಾರೀ ಪೈಪೋಟಿಗೆ ಇಳಿದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ, 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಕಲೆಹಾಕುವಲ್ಲಿ ಶಕ್ತವಾಯಿತು. ಇದೀಗ ಈ ಗುರಿಯನ್ನು ಬೆನ್ನಟ್ಟಿರುವ ಟೀಮ್ ಇಂಡಿಯಾ ಪಂದ್ಯ ಗೆಲ್ಲಲಿದೆಯೇ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

ಟೀಮ್ ಇಂಡಿಯಾ ಬೌಲರ್​ಗಳನ್ನು ಎದುರಿಸಿದ ಶ್ರೀಲಂಕಾ ಬ್ಯಾಟರ್​​ಗಳು ಆರಂಭಿಕ ಹಂತದಿಂದಲೇ ಮಂದಗತಿಯಲ್ಲಿ ಸಾಗಿದ್ದು, ಒಬ್ಬರಂತೆ ಒಬ್ಬರು ಸ್ಟಾರ್​ ವೇಗಿಗಳ ಆರ್ಭಟಕ್ಕೆ ತತ್ತರಿಸಿದರು. ಈ ವೇಳೆ ಅಕ್ಸರ್​ ಪಟೇಲ್ ಬೌಲಿಂಗ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸದೀರ ಸಮರವಿಕ್ರಮ, ಕಾದು ಆಡುವಲ್ಲಿ ವಿಫಲಗೊಂಡು ನೇರವಾಗಿ ಕೊಹ್ಲಿಗೆ ಕ್ಯಾಚ್ ನೀಡಿದರು. ಈ ಸಿಂಪಲ್ ಕ್ಯಾಚ್ ಹಿಡಿದ ವಿರಾಟ್​, ಎಂದಿನಂತೆ ಮೈದಾನದಲ್ಲೇ ನಾಲ್ಕು ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.

21 ಎಸೆತಗಳಲ್ಲಿ ಕೇವಲ 14 ರನ್​ ಕಲೆಹಾಕಿದ ಸಮರವಿಕ್ರಮ, ಸಿಕ್ಸರ್​ ಸಿಡಿಸಲು ಹೋಗಿ ಎಡವಿ ವಿರಾಟ್​ಗೆ ಸಿಂಪಲ್ ಕ್ಯಾಚ್ ಕೊಟ್ಟರು. ಈ ಕ್ಯಾಚ್ ಹಿಡಿದು ಸಂಭ್ರಮಿಸಿದ ಕೊಹ್ಲಿ, ಸಖತ್​ ಸ್ಟೆಪ್ ಹಾಕುವ ಮೂಲಕ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳನ್ನು ರಂಜಿಸಿದರು. ಸದ್ಯ ಕಿಂಗ್ ಕೊಹ್ಲಿಯ ಡ್ಯಾನ್ಸ್​ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net