ಕೊಹ್ಲಿಯ ಪಾಕಿಸ್ತಾನಿ ಅಭಿಮಾನಿಯೊಬ್ಬರ ಹಸಿರು ಜೆರ್ಸಿಯ ಮೇಲೆ ‘ವಿರಾಟ್​’ ಹೆಸರು; Viral Video ನೋಡಿ ನೆಟ್ಟಿಗರ ಪ್ರಶಂಸೆ

Untitled design (9)
Published on

ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 51ನೇ ಶತಕವನ್ನು ಗಳಿಸಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಅವರ ಇನ್ನಿಂಗ್ಸ್​​​ನಿಂದಾಗಿ ಪಾಕಿಸ್ತಾನ ಸೋತಿತು. ವಿರಾಟ್ ಶತಕ ಮತ್ತು ಪಾಕಿಸ್ತಾನದ ವಿರುದ್ಧ ಭಾರತದ ಗೆಲುವು ಭಾರತದಾದ್ಯಂತ ಆಚರಿಸಲ್ಪಡುತ್ತಿದ್ದ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್(Viral Video)​ ಆಗಿದೆ. ಈ ವಿಡಿಯೋ ನೆಟ್ಟಿಗರಿಗೆ ಮಾತ್ರವಲ್ಲ ವಿರಾಟ್​ ಕೊಹ್ಲಿ ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿತು.

ಚಾಂಪಿಯನ್ಸ್ ಟ್ರೋಫಿಯ ಐದನೇ ಪಂದ್ಯವು ಭಾರತ ಮತ್ತು ಪಾಕಿಸ್ತಾನ ನಡುವೆ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಇದರಲ್ಲಿ ಭಾರತೀಯ ಬೌಲರ್‌ಗಳ ಬಲಿಷ್ಠ ಬೌಲಿಂಗ್ ನಂತರ ತಂಡವು ಬ್ಯಾಟಿಂಗ್‌ಗೆ ಬಂದಾಗ ಕೊಹ್ಲಿ ಕ್ರೀಸ್‌ನಲ್ಲಿಯೇ ಇದ್ದು ತಂಡವನ್ನು ಪಂದ್ಯವನ್ನು ಗೆಲ್ಲುವಂತೆ ಮಾಡಿದರು. ಆದರೆ ಈಗ ಕೊಹ್ಲಿಯ ಪಾಕಿಸ್ತಾನಿ ಅಭಿಮಾನಿಯೊಬ್ಬರ ವಿಡಿಯೋ ಕೂಡ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿ ಆ ವ್ಯಕ್ತಿಯ ಪಾಕಿಸ್ತಾನಿ ಟಿ-ಶರ್ಟ್ ಮೇಲೆ ಕೊಹ್ಲಿಯ ಹೆಸರು 'ವಿರಾಟ್' ಎಂದು ಬರೆಯಲಾಗಿದೆ.

ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಬಂದಿದ್ದ ಪಾಕಿಸ್ತಾನಿ ಅಭಿಮಾನಿಯೊಬ್ಬರು ಪಾಕಿಸ್ತಾನವನ್ನು ಬೆಂಬಲಿಸಲು ಬಂದಿರಬಹುದು. ಆದರೆ ಅವರು ಕೊಹ್ಲಿಯ ದೊಡ್ಡ ಅಭಿಮಾನಿ ಎಂದು ವೈರಲ್​ ವಿಡಿಯೋ ನೋಡಿದವರು ಊಹಿಸುತ್ತಿದ್ದಾರೆ. ಅದಕ್ಕೆ ಕಾರಣ ಅವರ ಪಾಕಿಸ್ತಾನಿ ಜೆರ್ಸಿಯ ಮೇಲೆ ಬಾಬರ್, ರಿಜ್ವಾನ್ ಅಥವಾ ಯಾವುದೇ ಪಾಕಿಸ್ತಾನಿ ಆಟಗಾರನ ಹೆಸರು ಬರೆದಿರಲಿಲ್ಲ. ಬದಲಾಗಿ ಕೊಹ್ಲಿಯ ಅಭಿಮಾನಿಗಳು ಇಷ್ಟಪಡುತ್ತಿರುವ 'ವಿರಾಟ್' ಎಂಬ ಹೆಸರನ್ನು ಅದರ ಮೇಲೆ ಬರೆಯಲಾಗಿತ್ತು. ಆ ವ್ಯಕ್ತಿ ಮೂಲತಃ ಪಾಕಿಸ್ತಾನಿಯಾಗಿದ್ದರೂ ಅವರು ವಿರಾಟ್ ಅವರ ಅಭಿಮಾನಿ ಕೂಡ ಕೊಯ್ಲಿ ಅಭಿಮಾನಿಗಳು ಹೇಳುತ್ತಿದ್ದಾರೆ.

ವಿರಾಟ್ 18 ಜೆರ್ಸಿ ಧರಿಸಿರುವ ಪಾಕಿಸ್ತಾನಿ ಅಭಿಮಾನಿಯನ್ನು ನೋಡಿ ಬಳಕೆದಾರರು ಔರಾ ಎಂದರೆ ಕೊಹ್ಲಿ ಮಾತ್ರ ಎಂದು ಹೇಳುತ್ತಿದ್ದಾರೆ. ವಿರಾಟ್ 18 ಕೊಹ್ಲಿಯ ಜೆರ್ಸಿ ಸಂಖ್ಯೆಯಾಗಿದೆ. ಈ ವಿಡಿಯೋವನ್ನು ಇದುವರೆಗೂ 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕ್ರಿಕೆಟ್ ಮೊದಲು, ನಿಜವಾದ ಕ್ರಿಕೆಟ್ ಅಭಿಮಾನಿ ಮತ್ತು ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net