

ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ದುಬೈನಲ್ಲಿ ನಡೆದಿದ್ದು ಗೊತ್ತೆ ಇದೆ. ಪಂದ್ಯವನ್ನು ವೀಕ್ಷಿಸಲು ಬ್ರಿಟಿಷ್ ಗಾಯಕಿ ಮತ್ತು ಟಿವಿ ತಾರೆ ಜಾಸ್ಮಿನ್ ವಾಲಿಯಾ ಬಂದಿದ್ದರು. ಜಾಸ್ಮಿನ್ ವಾಲಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಅವರ ಗೆಳತಿ ಎಂಬ ವದಂತಿ ಹರಿದಾಡುತ್ತಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಅದಕ್ಕೆ ಪುಷ್ಠಿ ನೀಡುವಂತಿದೆ.
ಈ ವಿಡಿಯೋದಲ್ಲಿ ಜಾಸ್ಮಿನ್ ವಾಲಿಯಾ ಭಾರತ-ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯದ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಟೀಮ್ ಇಂಡಿಯಾವನ್ನು ಬೆಂಬಲಿಸುತ್ತಿರುವುದು ಕಂಡುಬರುತ್ತದೆ. ಪಾಕಿಸ್ತಾನದ ಇನ್ನಿಂಗ್ಸ್‌ನ 12ನೇ ಓವರ್ ಪ್ರಾರಂಭವಾಗುವ ಮೊದಲು ಕ್ಯಾಮೆರಾ ಜಾಸ್ಮಿನ್ ವಾಲಿಯಾ ಕಡೆಗೆ ತಿರುಗಿತು. ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ವಾಲಿಯಾ ಕ್ಯಾಮೆರಾವನ್ನು ನೋಡುತ್ತಾ ಕೈಬೀಸಿದಳು. ಇದಾದ ನಂತರ ಅವರು ಫ್ಲೈಯಿಂಗ್ ಕಿಸ್ ಕೂಡ ನೀಡಿದರು.
ಹಾರ್ದಿಕ್ ಪಾಂಡ್ಯ ಮತ್ತು ಜಾಸ್ಮಿನ್ ವಾಲಿಯಾ ಅವರ ಡೇಟಿಂಗ್ ವದಂತಿಗಳು ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರಾರಂಭವಾದವು. ಕೆಲವು ನೆಟ್ಟಿಗರು ಈ ಇಬ್ಬರೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಚಿತ್ರಗಳಲ್ಲಿನ ಹೋಲಿಕೆಗಳನ್ನು ಗಮನಿಸಿದ್ದಾರೆ. ಹಾರ್ದಿಕ್ ಮತ್ತು ನತಾಶಾ ವಿಚ್ಛೇದನ ಘೋಷಣೆಯಾದ ಕೆಲವು ದಿನಗಳ ನಂತರ ಈ ಚಿತ್ರಗಳು ವೈರಲ್ ಆಗಿದ್ದವು. ಜಾಸ್ಮಿನ್ ವಾಲಿಯಾ ಒಬ್ಬ ಬ್ರಿಟಿಷ್ ಗಾಯಕಿ ಮತ್ತು ಟಿವಿ ತಾರೆ. ಅವರು ಅನೇಕ ಹಿಂದಿ, ಇಂಗ್ಲಿಷ್ ಮತ್ತು ಪಂಜಾಬಿ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಅವರು ಜ್ಯಾಕ್ ನೈಟ್ ಜತೆಗಿನ 'ಬಾಮ್ ಡಿಗ್ಗಿ' ಹಾಡಿನ ಮೂಲಕ ಪ್ರಸಿದ್ಧರಾದರು. ಈ ಹಾಡು ಯುವಜನರಲ್ಲಿ ದೊಡ್ಡ ಹಿಟ್ ಆಗಿತ್ತು. ಈ ಹಾಡಿನಲ್ಲಿ ಕಾರ್ತಿಕ್ ಆರ್ಯನ್ ಕೂಡ ಇದ್ದರು. 'ವಾಂಟ್ ಸಮ್' ಎಂಬ ಹಾಡಿಗಾಗಿ ಅವರು ಟೈಮ್ಸ್ ಸ್ಕ್ವೇರ್ ಬಿಲ್ಬೋರ್ಡ್‌ನಲ್ಲಿ ಕಾಣಿಸಿಕೊಂಡ ಮೊದಲ ಬ್ರಿಟಿಷ್ ಭಾರತೀಯ ಮಹಿಳಾ ಗಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಾಲಿಯಾ ಇಂಗ್ಲೆಂಡ್‌ನಲ್ಲಿ ಜನಿಸಿದರು ಆದರೆ ಅವರ ಪಾಲಕರು ಭಾರತೀಯರು.
ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಪರ ಹಾರ್ದಿಕ್ ಪಾಂಡ್ಯ ಅದ್ಭುತ ಬೌಲಿಂಗ್ ಮಾಡಿದರು. ಅವರು ಪಾಕಿಸ್ತಾನದ ಪ್ರಮುಖ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಅವರನ್ನು ಔಟ್ ಮಾಡಿದರು. ಇದಾದ ನಂತರ ಹಾರ್ದಿಕ್ಅವರ ಬೌಲಿಂಗ್‌ಗೆ ಅರ್ಧಶತಕ ಗಳಿಸಿದ ಸೌದ್ ಶಕೀಲ್ ಕೂಡ ಔಟಾದರು.(ಏಜೆನ್ಸೀಸ್)