VIDEO | ಆರು ವರ್ಷದ ಬಾಲಕಿಯ ಬ್ಯಾಟಿಂಗ್​ ವಿಡಿಯೋ ವೈರಲ್​

ಬಬಬ ಡೆಬ
Published on

ನವದೆಹಲಿ: ಕ್ರಿಕೆಟ್​ ಆಟ ಭಾರತದಲ್ಲಿ ಅಪಾರವಾಗಿ ಪ್ರೀತಿಸಲ್ಪಡುತ್ತದೆ. ಹೀಗಾಗಿ ಸಹಜವಾಗಿಯೇ ಭಾರತದ ಮಕ್ಕಳಿಗೆ ಕ್ರಿಕೆಟ್​ ಯಾವಾಗಲೂ ಮೊದಲ ಆದ್ಯತೆಯ ಆಟವಾಗಿರುತ್ತದೆ. ಅದು ಬರೀ ಹುಡುಗರ ಮಟ್ಟಿಗೆ ಮಾತ್ರವಲ್ಲ, ಈಗ ಹುಡುಗಿಯರಿಗೂ ಕ್ರಿಕೆಟ್​ ಆಟವೇ ಮೊದಲ ಆಯ್ಕೆಯಾಗಿದೆ. ಕೇರಳದ ಆರು ವರ್ಷದ ಬಾಲಕಿಯೊಬ್ಬರು ಪ್ರದಶಿರ್ಸಿರುವ ಅಮೋ ಬ್ಯಾಟಿಂಗ್​ ಕೌಶಲದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಕೋಯಿಕ್ಕೋಡ್​ನ ಆರು ವರ್ಷದ ಹುಡುಗಿ ಮೆಹಕ್​ ಫತಿಮಾ ಸಂಪೂರ್ಣ ಕ್ರಿಕೆಟ್​ ಕಿಟ್​ ಧರಿಸಿ ಪ್ರದಶಿರ್ಸಿರುವ ಬ್ಯಾಟಿಂಗ್​ ಕೌಶಲಗಳು ಕ್ರಿಕೆಟ್​ ಪ್ರೇಮಿಗಳ ಗಮನಸೆಳೆದಿವೆ. ಸ್ಟ್ರೈಟ್​​ ಡೆವ್​, ಪುಲ್​ ಶಾಟ್​ ಮುಂತಾದ ಎಲ್ಲ ರೀತಿಯ ಹೊಡೆತಗಳನ್ನು ಬಾರಿಸಿರುವ ಬಾಲಕಿಯ ವಿಡಿಯೋ ಸಾಕಷ್ಟು ಜನರು ಹುಬ್ಬೇರಿಸುವಂತೆ ಮಾಡಿದೆ.

7 ತಿಂಗಳ ಹಿಂದಷ್ಟೇ ಕ್ರಿಕೆಟ್​ ಆಡಲಿ ಆರಂಭಿಸಿದ ಮೆಹಕ್​ ಫತಿಮಾ ಈಗಾಗಲೆ ಸಾಕಷ್ಟು ಪರಿಣತಿ ಪಡೆದಿದ್ದಾಳೆ. 3 ವರ್ಷದ ಸಹೋದರನಿಗೆ ತಂದೆ ಮುನೀರ್​ ಕ್ರಿಕೆಟ್​ ಆಟ ಕಲಿಸುತ್ತಿದ್ದಾಗ ಮೆಹಕ್​, ತನಗೂ ಕ್ರಿಕೆಟ್​ ಆಟ ಕಲಿಸುವಂತೆ ಕೇಳಿಕೊಂಡಿದ್ದಳು. ಅಲ್ಲದೆ, ನಾನು ಹುಡುಗಿಯಾಗಿರುವ ಕಾರಣಕ್ಕೆ ನೀವು ಕ್ರಿಕೆಟ್​ ಕಲಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಳು. ಈ ವೇಳೆ ಮಗಳಿಗೂ ಕ್ರಿಕೆಟ್​ ಆಟದ ಮೇಲೆ ಆಸಕ್ತಿ ಇದೆ ಎಂಬುದನ್ನು ತಂದೆ ಮನವರಿಕೆ ಮಾಡಿಕೊಂಡಿದ್ದರು ಎಂದು ಮೆಹಕ್​ ತಾಯಿ ಖದೀಜಾ ತಿಳಿಸಿದ್ದಾರೆ.

ಆ ಬಳಿಕ ನಿರಂತರವಾಗಿ ಕ್ರಿಕೆಟ್​ ತರಬೇತಿ ಪಡೆಯಲಾರಂಭಿಸಿದ ಮೆಹಕ್​ಗೆ ಲಾಕ್​ಡೌನ್​ನಿಂದಾಗಿ ಮತ್ತೊಮ್ಮೆ ಅಡಚಣೆ ಎದುರಾಯಿತು. ಆದರೂ ಪಟ್ಟು ಬಿಡದೆ ಮನೆಯಲ್ಲೇ ತರಬೇತಿ ಮುಂದುವರಿಸಿದ್ದಳು. ಭಾರತ ತಂಡದ ಸ್ಟಾರ್​ ಬ್ಯಾಟುಗಾರ್ತಿ ಸ್ಮೃತಿ ಮಂದನಾ, ಮೆಹಕ್​ಗೆ ಇಷ್ಟದ ಮಹಿಳಾ ಕ್ರಿಕೆಟರ್​ ಆಗಿದ್ದಾರೆ. ಈ ನಡುವೆ ಮೆಹಕ್​ ಬ್ಯಾಟಿಂಗ್​ ವಿಡಿಯೋಗೆ ಯುವ ಮಹಿಳಾ ಕ್ರಿಕೆಟರ್​ ಜೆಮೀಮಾ ರೋಡ್ರಿಗಸ್​ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net