ವಿಶ್ವಕಪ್​ನಲ್ಲಿ ಇಂದು ಆಸ್ಟ್ರೆಲಿಯಾ-ನ್ಯೂಜಿಲೆಂಡ್​ ಮುಖಾಮುಖಿ

aus vs nz web
Published on

ಧರ್ಮಶಾಲಾ: ಆರಂಭಿಕ 2 ಸೋಲಿನ ಬಳಿಕ ಹ್ಯಾಟ್ರಿಕ್​ ಗೆಲುವಿನೊಂದಿಗೆ ಬೀಗುತ್ತಿರುವ ಆಸ್ಟ್ರೆಲಿಯಾ ಮತ್ತು ಸತತ 4 ಗೆಲುವಿನ ಬಳಿಕ ಸೋಲಿನ ರುಚಿ ನೋಡಿರುವ ನ್ಯೂಜಿಲೆಂಡ್​ ತಂಡಗಳು ಏಕದಿನ ವಿಶ್ವಕಪ್​ನಲ್ಲಿ ಶನಿವಾರ ಮುಖಾಮುಖಿ ಆಗಲಿವೆ. ಟ್ರಾನ್ಸ್​-ಟಾಸ್ಮನ್​ ಎದುರಾಳಿಗಳ ಈ ಹಣಾಹಣಿ, ಈಗಾಗಲೆ ಕೆಟ್ಟ ಔಟ್​ಫೀಲ್ಡ್​ನಿಂದಾಗಿ ಟೀಕೆಗಳಿಗೆ ಗುರಿಯಾಗಿರುವ ಎಚ್​ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬ್ಯಾಟಿಂಗ್​ ವೈಫಲ್ಯಗಳಿಂದಾಗಿ ಆರಂಭಿಕ ಪಂದ್ಯಗಳಲ್ಲಿ ಪರದಾಡಿದ್ದ ಪ್ಯಾಟ್​ ಕಮ್ಮಿನ್ಸ್​ ಬಳಗ ಇದೀಗ ಲಯಕ್ಕೆ ಮರಳಿದ್ದು, ಕಳೆದೆರಡು ಪಂದ್ಯಗಳಲ್ಲಿ 360ಕ್ಕೂ ಅಧಿಕ ಮೊತ್ತ ಪೇರಿಸಿದೆ. ಅತ್ತ ನ್ಯೂಜಿಲೆಂಡ್​ ತಂಡ ವೈವಿಧ್ಯತೆಯಿಂದ ಕೂಡಿದ ಬಲಿಷ್ಠ ಬೌಲಿಂಗ್​ ವಿಭಾಗವನ್ನು ಹೊಂದಿದ್ದು, ಟೂರ್ನಿಯಲ್ಲಿ ಇದುವರೆಗೆ ಯಾವ ಎದುರಾಳಿಗೂ 300ರ ಗಡಿ ದಾಟಲು ಅವಕಾಶ ನೀಡಿಲ್ಲ. ಹೀಗಾಗಿ ಈ ಮುಖಾಮುಖಿ ಕುತೂಹಲ ಕೆರಳಿಸಿದೆ.

ನಾಯಕ ಕೇನ್​ ವಿಲಿಯಮ್ಸನ್​ ಗಾಯದಿಂದಾಗಿ ಈ ಪಂದ್ಯಕ್ಕೂ ಅಲಭ್ಯರಾಗಿದ್ದು, ನ್ಯೂಜಿಲೆಂಡ್​ ಗೆದ್ದರೆ ಸೆಮೀಸ್​ ಹಾದಿ ಸುಗಮವಾಗಲಿದೆ. ಆಸೀಸ್​ಗೂ ಸೆಮೀಸ್​ ಅವಕಾಶ ವೃದ್ಧಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲುವಿನ ಅಗತ್ಯವಿದೆ. ಹಾಲಿ ವಿಶ್ವಕಪ್​ನಲ್ಲಿ ಕಿವೀಸ್​ ಭರ್ಜರಿ ಲಯದಲ್ಲಿದ್ದರೂ, ಆಸೀಸ್​ ವಿರುದ್ಧದ ಅದರ ದಾಖಲೆ ಉತ್ತಮವಾಗಿರದೆ ಇರುವುದು ಹಿನ್ನಡೆ ಎನಿಸಿದೆ.

ಏಕದಿನ ಮುಖಾಮುಖಿ: 141

ಆಸ್ಟ್ರೆಲಿಯಾ: 95, ನ್ಯೂಜಿಲೆಂಡ್​: 39, ರದ್ದು: 7

ವಿಶ್ವಕಪ್​ ಮುಖಾಮುಖಿ: 11

ಆಸ್ಟ್ರೆಲಿಯಾ: 8, ನ್ಯೂಜಿಲೆಂಡ್​: 3

ಆರಂಭ: ಬೆಳಗ್ಗೆ 10.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net