More

    ವಿಶ್ವಕಪ್​ ನಂತರ ರಾಹುಲ್​ ದ್ರಾವಿಡ್​ ಭವಿಷ್ಯವೇನು? ಇನ್ನೂ ನಿಗೂಢವಾಗಿದೆ ಮುಂದಿನ ನಡೆ!

    ನವದೆಹಲಿ: ಟೀಮ್​ ಇಂಡಿಯಾದ ಹಾಲಿ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಅವಧಿ ಹಾಲಿ ಏಕದಿನ ವಿಶ್ವಕಪ್​ ಟೂರ್ನಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಆದರೆ ಅವರ ಭವಿಷ್ಯ ಇನ್ನೂ ನಿಗೂಢವಾಗಿಯೇ ಉಳಿದಿದೆ. ಒಂದು ವೇಳೆ ಅವರು ಹುದ್ದೆಯಲ್ಲಿ ಮುಂದುವರಿಯಲು ಬಯಸಿದರೂ, ಮತ್ತೆ ನಡೆಯಲಿರುವ ಕೋಚ್​ ಆಯ್ಕೆ ಪ್ರಕ್ರಿಯೆಯ ವೇಳೆ ಮರುಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ ವಿಶ್ವಕಪ್​ ಬೆನ್ನಲ್ಲೇ ಆಸ್ಟ್ರೆಲಿಯಾ ವಿರುದ್ಧ ತವರಿನಲ್ಲಿ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಯ ವೇಳೆ ಎನ್​ಸಿಎ ಮುಖ್ಯಸ್ಥ ವಿವಿಎಸ್​ ಲಕ್ಷ್ಮಣ್​ ಹಂಗಾಮಿ ಕೋಚ್​ ಆಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.

    ಸದ್ಯದ ಪ್ರಕಾರ, 51 ವರ್ಷದ ದ್ರಾವಿಡ್​ ವಿಶ್ವಕಪ್​ ಬಳಿಕ ಹುದ್ದೆಯಲ್ಲಿ ಮುಂದುವರಿಯಲು ಬಯಸುವ ಸಾಧ್ಯತೆ ಕಡಿಮೆ ಇದೆ. ಬದಲಾಗಿ ಅವರು ಐಪಿಎಲ್​ ತಂಡವೊಂದರ ಕೋಚ್​ ಹುದ್ದೆಯತ್ತ ಒಲವು ತೋರುವ ಸಾಧ್ಯತೆಗಳಿವೆ.

    ಇನ್ನು ಲೋಧಾ ಸಮಿತಿ ಶಿಫಾರಸಿನ ಅನ್ವಯ ರೂಪುಗೊಂಡಿರುವ ಬಿಸಿಸಿಐ ನಿಯಮಾವಳಿಯ ಪ್ರಕಾರ, ದ್ರಾವಿಡ್​ ಹುದ್ದೆಯಲ್ಲಿ ಮುಂದುವರಿಯಲು ಬಯಸಿದರೂ, ಹೊಸ ಅವಧಿಗೆ ಕೋಚ್​ ನೇಮಕಕ್ಕೆ ಮತ್ತೆ ಆಯ್ಕೆ ಪ್ರಕ್ರಿಯೆ ನಡೆಸಬೇಕಾಗುತ್ತದೆ. ನ. 19ರಂದು ವಿಶ್ವಕಪ್​ ಫೈನಲ್​ ನಡೆದರೆ, ಅದಾದ 4 ದಿನಗಳಲ್ಲೇ ಅಂದರೆ ನ.23ರಿಂದ ಆಸೀಸ್​ ವಿರುದ್ಧ ಟಿ20 ಸರಣಿ ನಡೆಯಲಿದೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾ, ಕೆಎಲ್​ ರಾಹುಲ್​ ಸಹಿತ ಪ್ರಮುಖ ಕ್ರಿಕೆಟಿಗರು ಈ ಸರಣಿಯಿಂದ ವಿಶ್ರಾಂತಿ ಪಡೆಯುವ ಸಾಧ್ಯತೆಗಳಿವೆ.

    ದ್ರಾವಿಡ್​ ಗೈರಿನಲ್ಲಿ ಯಾವಾಗಲೂ ಲಕ್ಷ್ಮಣ್​ ಹಂಗಾಮಿ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದಾರೆ. ವಿಶ್ವಕಪ್​ ನಂತರವೂ ಅದು ಮುಂದುವರಿಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಮೈಸೂರು ದಸರಾ ವೈಭವಕ್ಕೆ ಮನಸೋತ ಆಸೀಸ್​ ಮಾಜಿ ಕ್ರಿಕೆಟಿಗ ಹೇಡನ್​ ಪುತ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts