More

    ಮೈಸೂರು ದಸರಾ ವೈಭವಕ್ಕೆ ಮನಸೋತ ಆಸೀಸ್​ ಮಾಜಿ ಕ್ರಿಕೆಟಿಗ ಹೇಡನ್​ ಪುತ್ರಿ!

    ಬೆಂಗಳೂರು: ಆಸ್ಟ್ರೆಲಿಯಾದ ಮಾಜಿ ಬ್ಯಾಟಿಂಗ್​ ದೈತ್ಯ ಮ್ಯಾಥ್ಯೂ ಹೇಡನ್​ ಅವರ ಪುತ್ರಿ ಗೇಸ್​ ಹೇಡನ್​ ಏಕದಿನ ವಿಶ್ವಕಪ್​ ವೇಳೆ ಟಿವಿ ನಿರೂಪಕಿಯಾಗಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೇಳೆ ಪ್ರಸಾರ ವಾಹಿನಿಯ ಕಾರ್ಯಕ್ರಮದ ಭಾಗವಾಗಿ ದಸರಾ ಸಮಯದಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಗೇಸ್​ ಹೇಡನ್​, ಪಾರಂಪರಿಕ ಸಾಂಸತಿಕ ವೈಭವಕ್ಕೆ ಮನಸೋತಿದ್ದಾರೆ.

    ಮೈಸೂರು ದಸರಾ ಅನುಭವವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಗ್ರೇಸ್​ ಹೇಡನ್​, ‘ಮೈಸೂರು ದಸರಾ ಹಬ್ಬದ ನೆನಪು ಇನ್ನು ನನ್ನ ಮನದಲ್ಲಿ ಯಾವಾಗಲೂ ಹಸನಾಗಿರಲಿದೆ. ಶ್ರೀಮಂತ ಇತಿಹಾಸ, ಸಂಸತಿ ಮತ್ತು ವಾಸ್ತುಶಿಲ್ಪವನ್ನು ಒಳಗೊಂಡ ನಗರವಿದು. ಮೈಸೂರು ಅರಮನೆ ಅಮೋವಾದುದು. 10 ದಿನಗಳ ದಸರಾ ಸಮಯದಲ್ಲಿ ಮೈಸೂರು ನಗರ ಅಮೋಘವಾದ ಜೀವಂತಿಕೆ ಪಡೆದುಕೊಳ್ಳುತ್ತದೆ. ರಾತ್ರಿ 7 ಗಂಟೆಯ ನಂತರ ದೀಪಗಳು ಬೆಳಗಿದಾಗ ನಗರದ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ. ಇದು ನಿಜಕ್ಕೂ ನಂಬಲಸಾಧ್ಯ. ನನ್ನನ್ನು ಬರಮಾಡಿಕೊಂಡಿದ್ದಕ್ಕೆ ಮೈಸೂರಿಗೆ ಧನ್ಯವಾದಗಳು. ಶೀಘ್ರದಲ್ಲೇ ಮತ್ತೊಮ್ಮೆ ಭೇಟಿಯಾಗೋಣ’ ಎಂದು ಬರೆದುಕೊಂಡಿದ್ದಾರೆ.

    ನವರಾತ್ರಿಯ ಸಮಯದಲ್ಲಿ ಗ್ರೇಸ್​ ಹೇಡನ್​, ಅಹಮದಾಬಾದ್​ನಲ್ಲಿ ಗಾರ್ಬಾ ನೃತ್ಯ, ಕೋಲ್ಕತದಲ್ಲಿ ದುರ್ಗಾ ಪೂಜೆಯನ್ನೂ ಆನಂದಿಸಿದ್ದಾರೆ. ಚೆನ್ನೈನಲ್ಲೂ ನವರಾತ್ರಿ ಹಬ್ಬದ ಸಂಭ್ರಮವನ್ನು ಅನುಭವಿಸಿದ್ದಾರೆ. ತಂದೆ ಮ್ಯಾಥ್ಯೂ ಹೇಡನ್​ರಂತೆ ಗ್ರೇಸ್​ಗೂ ಭಾರತ ಅತ್ಯಂತ ನೆಚ್ಚಿನ ದೇಶವೆನಿಸಿದೆ.

    ವಿಶ್ವಕಪ್​ನಲ್ಲಿ ಸ್ಫೋಟಕ ಶತಕ ಸಿಡಿಸಿ ಬ್ಯಾಟನ್ನೇ ಮಗುವಿನಂತೆ ಹಿಡಿದ ಮ್ಯಾಕ್ಸ್​ವೆಲ್​! ಹೀಗಿದೆ ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts