ಹಾರ್ದಿಕ್ ಪಾಂಡ್ಯ ಪುತ್ರನ ಬಗ್ಗೆ ತೈಮುರ್ ಅಲಿ ಖಾನ್‌ಗೆ ಬೇಸರವೇಕೆ?

pandya son taimur
Published on

ಬೆಂಗಳೂರು: ವರ್ಷಾರಂಭದಲ್ಲಿ ನಿಶ್ಚಿತಾರ್ಥ, ಬಳಿಕ ಲಾಕ್‌ಡೌನ್ ಸಮಯದಲ್ಲಿ ಅಪ್ಪನಾಗುತ್ತಿರುವ ವಿಷಯ ತಿಳಿಸಿ ಅಚ್ಚರಿ ಮೂಡಿಸಿದ್ದ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಗಂಡು ಮಗುವಿನ ಜನನದ ವಿಷಯವನ್ನೂ ನಿರೀಕ್ಷೆಗಿಂತ ವೇಗವಾಗಿ ಹಂಚಿಕೊಂಡಿದ್ದರು. ಹಾರ್ದಿಕ್ ಪಾಂಡ್ಯರ ಪುತ್ರ ಈಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಪಾಂಡ್ಯ ಪುತ್ರನ ಚಿತ್ರಗಳ ಝಲಕ್ ಭರ್ಜರಿ ವೀಕ್ಷಣೆ ಕಾಣುತ್ತಿದೆ. ಇದರಿಂದಾಗಿ, ಇದುವರೆಗೆ ಎಲ್ಲರ ಆಕರ್ಷಣೆಯ ಕೇಂದ್ರವೆನಿಸಿದ್ದ ಬಾಲಿವುಡ್ ದಂಪತಿ ಸೈಫ್​ ಅಲಿ ಖಾನ್ ಮತ್ತು ಕರೀನಾ ಕಪೂರ್ ಪುತ್ರ ತೈಮುರ್ ಅಲಿ ಖಾನ್ ಬದಿಗೆ ಸರಿಯುವ ಭೀತಿ ಎದುರಿಸುತ್ತಿದ್ದಾರಂತೆ! ಈ ಬಗ್ಗೆ ವಿವಿಧ ಮೀಮ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಾರ್ದಿಕ್ ಪಾಂಡ್ಯ ಪುತ್ರನ ನೆಪದಲ್ಲಿ ಮತ್ತೊಮ್ಮೆ ತೈಮುರ್ ಅಲಿ ಖಾನ್ ಟ್ರೋಲ್‌ಗೆ ಒಳಗಾಗಿದ್ದಾನೆ.

ಹಾರ್ದಿಕ್-ನತಾಶಾ ದಂಪತಿಗೆ ಅಭಿನಂದನೆ ಹೇಳುವ ಜತೆಜತೆಯಲ್ಲೇ ತೈಮುರ್ ಕೂಡ ಸುದ್ದಿಗೆ ಬಂದಿದ್ದಾನೆ. ಇದುವರೆಗೆ ತೈಮುರ್ ಹೋದಲೆಲ್ಲ ಛಾಯಾಗ್ರಾಹಕರು ಆತನನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವ ಪೈಪೋಟಿಗೆ ಇಳಿಯುತ್ತಿದ್ದರು. ಆದರೆ ಹಾರ್ದಿಕ್ ಪುತ್ರನ ಆಗಮನದ ಬಳಿಕ ಆತನಿಗೆ ಬೇಡಿಕೆ ಕಡಿಮೆಯಾಗಬಹುದು ಎಂಬ ರೀತಿಯ ಟ್ರೋಲ್‌ಗಳು ಹೆಚ್ಚಾಗಿ ಹರಿದಾಡಿವೆ. ಹಾರ್ದಿಕ್ ಪಾಂಡ್ಯ ಪುತ್ರನ ಆಗಮನದಿಂದಾಗಿ ತೈಮುರ್ ಅಲಿ ಖಾನ್ ಬೇಸರಗೊಂಡಿದ್ದಾನೆ ಎಂಬ ರೀತಿಯ ಮೀಮ್ಸ್‌ಗಳೂ ಹರಿದಾಡುತ್ತಿವೆ.

ಕಳೆದ ಗುರುವಾರ ಗಂಡು ಮಗು ಜನಿಸಿದ ಬಳಿಕ ಹಾರ್ದಿಕ್ ಪಾಂಡ್ಯ ಅಪಾರ ಖುಷಿಯಲ್ಲಿದ್ದು, ತಮ್ಮ ಪ್ರತಿ ಚಟುವಟಿಕೆಯನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net