ಮಗುವಿನ ಬಗ್ಗೆ ನತಾಶಾಗೆ ಹಾರ್ದಿಕ್ ಪಾಂಡ್ಯ ಹೇಳಿದ್ದೇನು ಗೊತ್ತೇ?

pandya1
Published on

ವಡೋದರ: ಮಗುವಿನ ಆಗಮನದ ಬಳಿಕ ಪತ್ನಿ ನತಾಶಾ ಸ್ಟಾಂಕೋವಿಕ್ ಜತೆಗಿನ ಮೊದಲ ಚಿತ್ರವನ್ನು ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ನತಾಶಾಗೆ ವಿಶೇಷ ರೀತಿಯಲ್ಲಿ ಧನ್ಯವಾದ ಸಮರ್ಪಣೆ ಮಾಡಿದ್ದಾರೆ.

ನತಾಶಾಗೆ ಗುಲಾಬಿಯ ಗುಚ್ಛ ನೀಡಿರುವ ಚಿತ್ರವನ್ನು ಪ್ರಕಟಿಸಿರುವ 26 ವರ್ಷದ ಹಾರ್ದಿಕ್ ಪಾಂಡ್ಯ, ‘ನನ್ನ ಗುಲಾಬಿಗೆ ಗುಲಾಬಿಗಳು. ನಾನು ಇದುವರೆಗೆ ಪಡೆದ ಅತ್ಯಂತ ಶ್ರೇಷ್ಠ ಉಡುಗೊರೆಗಾಗಿ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ನತಾಶಾ, ‘ಲವ್ ಯೂ’ ಎಂದು ಬರೆದುಕೊಂಡು ಹೃದಯದ ಇಮೋಜಿ ಪ್ರಕಟಿಸಿದ್ದಾರೆ. ಮತ್ತೊಂದೆಡೆ, ನತಾಶಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ‘ನನ್ನ ಕುಟುಂಬ, ನನ್ನ ಹಾರ್ದಿಕ್ ಪಾಂಡ್ಯ’ ಎಂದು ಬರೆದುಕೊಂಡು ಚಿತ್ರ ಪ್ರಕಟಿಸಿದ್ದಾರೆ. ಇದಕ್ಕೆ ಹಾರ್ದಿಕ್ ಪಾಂಡ್ಯ ಹೃದಯದ ಇಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಗುರುವಾರವಷ್ಟೇ ಮಗುವಿನ ಆಗಮನದ ಬಗ್ಗೆ ಸಂಭ್ರಮ ಹಂಚಿಕೊಂಡಿದ್ದ ಹಾರ್ದಿಕ್ ಪಾಂಡ್ಯ, ಶುಕ್ರವಾರ ಮಗುವಿಗೆ ಡೈಪರ್ ತರಲು ಹೋಗುತ್ತಿರುವುದಾಗಿ ಹೇಳಿಕೊಂಡಿದ್ದರು. ಬಳಿಕ, ‘ದೇವರ ಆರ್ಶೀವಾದ’ ಎಂದು ಬರೆದುಕೊಂಡು ಮಗುವನ್ನು ಹಿಡಿದುಕೊಂಡಿರುವ ಚಿತ್ರವನ್ನು ಪ್ರಕಟಿಸಿದ್ದರು.

ಈ ವರ್ಷದ ಮೊದಲ ದಿನ ಸ್ಟಾಂಕೋವಿಕ್​ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹಾರ್ದಿಕ್​ ಪಾಂಡ್ಯ, ಬಳಿಕ ಮೇನಲ್ಲಿ ಲಾಕ್​ಡೌನ್​ ಸಮಯದಲ್ಲಿ ತಂದೆಯಾಗುತ್ತಿರುವ ವಿಷಯವನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದರು. ಈ ನಡುವೆ ಅವರು ಸರಳವಾಗಿ ವಿವಾಹವಾಗಿದ್ದಾರೆ ಎನ್ನಲಾಗಿದೆ. ಸೆರ್ಬಿಯಾ ಮೂಲದ ರೂಪದರ್ಶಿ ನತಾಶಾ ಸ್ಟಾಂಕೋವಿಕ್​, ಕನ್ನಡದ ದನ ಕಾಯೋನು ಸಿನಿಮಾದಲ್ಲೂ ನಟಿಸಿದ್ದಾರೆ. ಹಾರ್ದಿಕ್​ ಮುಂಬರುವ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net