

ಬೆಂಗಳೂರು: ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಫೆಬ್ರವರಿ 7ರಿಂದ 12ರವರೆಗೆ ನಡೆಯಲಿರುವ 8ನೇ ಆವೃತ್ತಿಯ ರಾಷ್ಟ್ರೀಯ ಪ್ಯಾರಾ ಬೋಶಿಯನ್ ಚಾಂಪಿಯನ್ಷಿಪ್ ನಡೆಯಲಿದ್ದು, ರಾಜ್ಯದ ಕ್ರೀಡಾಪಟುಗಳ ಆಯ್ಕೆ ಟ್ರಯಲ್ಸ್ ಆಯೋಜಿಸಲಾಗಿದೆ.
ರಾಜ್ಯ ಅಂಗವಿಕಲರ ಸಂಸ್ಥೆ ಹಾಗೂ ಪ್ಯಾರಾ ಬೋಶಿಯಾ ಕ್ರೀಡಾ ಸಂಸ್ಥೆ ಆಶ್ರಯದಲ್ಲಿ ಜನವರಿ 26ರಂದು ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬೋಶಿಯಾ ಇಂಡಿಯಾ ನಿಯಮಾನುಸಾರ ಪ್ರಕ್ರಿಯೆ ನಡೆಯಲಿದೆ.