ಡಬ್ಲ್ಯುಟಿಸಿ ಫೈನಲ್ ವೇಳೆ ಐಸಿಸಿ ಹಾಲ್ ಆಫ್​ ಫೇಮ್‌ಗೆ 10 ದಿಗ್ಗಜರು ಸೇರ್ಪಡೆ

icc hall web
Published on

ದುಬೈ: ಭಾರತ-ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದ ವೇಳೆ 5 ಕ್ರಿಕೆಟ್ ಯುಗದ ತಲಾ ಇಬ್ಬರಂತೆ ಒಟ್ಟು 10 ದಿಗ್ಗಜರನ್ನು ಐಸಿಸಿ ಹಾಲ್ ಆಫ್​ ಫೇಮ್‌ಗೆ ಸೇರ್ಪಡೆಗೊಳಿಸಲು ಐಸಿಸಿ ನಿರ್ಧರಿಸಿದೆ. ಈಗಾಗಲೆ 93 ಮಾಜಿ ಕ್ರಿಕೆಟಿಗರಿಗೆ ಈ ಗೌರವ ನೀಡಲಾಗಿದೆ.

ಆರಂಭಿಕ ಕ್ರಿಕೆಟ್ ಯುಗ (1918ಕ್ಕೆ ಮುನ್ನ), ಯುದ್ಧಕಾಲದ ಕ್ರಿಕೆಟ್ ಯುಗ (1918-1945), ಯುದ್ಧ ನಂತರದ ಕ್ರಿಕೆಟ್ ಯುಗ(1946-1970), ಏಕದಿನ ಯುಗ (1971-1995) ಮತ್ತು ಆಧುನಿಕ ಕ್ರಿಕೆಟ್ ಯುಗ (1996-2016) ಎಂದು 5 ಕ್ರಿಕೆಟ್ ಯುಗಗಳನ್ನು ಗುರುತಿಸಿರುವ ಐಸಿಸಿ, ಈ ಯುಗದ ತಲಾ ಇಬ್ಬರನ್ನು ಹಾಲ್ ಆಫ್​ ಫೇಮ್‌ಗೆ ಆಯ್ಕೆ ಮಾಡಲಿದೆ.

ಐಸಿಸಿ ಹಾಲ್ ಆಫ್​ ಫೇಮ್ ವೋಟಿಂಗ್ ಅಕಾಡೆಮಿ ಆಯ್ಕೆ ಮಾಡಲಿರುವ ಈ 10 ದಿಗ್ಗಜರ ಹೆಸರನ್ನು ಐಸಿಸಿ ಜೂನ್ 13ರಂದು ಪ್ರಕಟಿಸಲಿದೆ. ಚೊಚ್ಚಲ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net