

ಚೈನ್ನೈ: ಟೀಮ್ ಇಂಡಿಯಾದ ಬ್ಯಾಟರ್ ತಿಲಕ್ ವರ್ಮಾ(Tilak Verma) ಚೈನ್ನೈನ ಚೆಪಾಕ್ ಕ್ರೀಡಾಂಣಗದಲ್ಲಿ ಇಂಗ್ಲೆಂಡ್ ವಿರುದ್ದ(ಜ.25) ನಡೆದ ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಅಜೇಯ 48 ರನ್ ಗಳಿಸುವ ಮೂಲಕ ಭಾರತದ ಗೆಲುವಿಗೆ ಕಾರಣರಾಗಿದ್ದರು. ಇದೀಗ ಅಜೇಯ 78 ರನ್ಗಳಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಮಾಡಿದ್ದಾರೆ.
ಹೌದು, ಕಳೆದ ರಾತ್ರಿ(ಜ.25) ನಡೆದ ಪಂದ್ಯದಲ್ಲಿ 55 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 72 ರನ್ ಗಳಿಸಿದ್ದಾರೆ. ಇದರಿಂದ ಇಂಗ್ಲೆಂಡ್ ನೀಡಿದ್ದ 165 ರನ್ಗಳನ್ನು ಗುರಿಯನ್ನು 19.2 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166ರನ್ ಗಳಿಸಲು ಸುಲಭವಾಯಿತು.
ಇದೀಗ ತಿಲಕ್ ವರ್ಮಾ ಕಳೆದ ವರ್ಷ(2024) ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ 20 ರನ್ಗಳಿಗೆ ಔಟಾದ ನಂತರ ಆಡಿದ ಒಟ್ಟು ನಾಲ್ಕು ಇನ್ನಿಂಗ್ಸ್ನಲ್ಲಿ ಅಜೇಯ(ಔಟಾಗದೆ) 107, 120, 19, 72 ರನ್ಗಳಸುವ ಮೂಲಕ ಒಟ್ಟು 318 ರನ್ ಗಳಿಸಿ ವಿಶ್ವ ದಾಖಲೆ ಮಾಡಿದ್ದಾರೆ. ಇದುವರೆಗೆ (2023 ರಲ್ಲಿ) ಎರಡು ಪಂದ್ಯಗಳಲ್ಲಿ ಔಟಾಗದೆ 217 ರನ್ ಗಳಿಸುವ ಮೂಲಕ ನ್ಯೂಜಿಲ್ಯಾಂಡ್ನ ಮಾರ್ಕ್ ಚಾಪರ್ಮಾನ್ ಹೆಸರಲ್ಲಿ ಈ ದಾಖಲೆ ಇತ್ತು. ಇದೀಗ ತಿಲಕ್ ವರ್ಮಾ ಪಾಲಾಗಿದೆ.
ಗಾಯದಿಂದ ಬಳಲುತ್ತಿದ್ದ ತಿಲಕ್ ಕಳೆದ ನವೆಂಬರ್ನಲ್ಲಿ ಕಾಮ್ಬ್ಯಾಕ್ ಮಾಡುವ ಮೂಲಕ ಆರು ಇನಿಂಗ್ಸ್ನಲ್ಲಿ 185.5 ಸರಾಸರಿಯಲ್ಲಿ ಎರಡು ಶತಕ ಮತ್ತು ಅರ್ಧ ಶತಕ ಬಾರಿಸುವ ಮೂಲಕ 318ರನ್ ಗಳಿಸಿದ್ದಾರೆ. ಇದುವರೆಗೆ 22 ಪಂದ್ಯಗಳಲ್ಲಿ 21 ಇನಿಂಗ್ಸ್ನಲ್ಲಿ ಆಡಿರುವ ತಿಲಕ್ 707ರನ್ ಗಳಿಸಿದ್ದಾರೆ.
ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ(ಜ.25) ಭಾರತ (Team India) ಹಾಗೂ ಇಂಗ್ಲೆಂಡ್ (England) ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯರು 2 ವಿಕೆಟ್ಗಳ ಜಯ ಸಾಧಿಸುವ ಮೂಲಕ 2-0 ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು (Team India) ಎದುರಾಳಿಗಳನ್ನು ನಾಯಕ ಜೋಸ್ ಬಟ್ಲರ್ (45 ರನ್, 30 ಎಸೆತ, 2 ಬೌಂಡರಿ, 3 ಸಿಕ್ಸರ್) ದಿಟ್ಟ ಪ್ರತಿರೋಧದ ಹೊರತಾಗಿಯೂ 20 ಓವರ್ಗಳಲ್ಲಿ 9 ವಿಕೆಟ್ಗೆ 165 ರನಗ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಗುರಿ ಬೆನ್ನತ್ತಿದ್ದ ಟೀಮ್ ಇಂಡಿಯಾಗೆ (Team India) ಆರಂಭದಲ್ಲೇ ಆಘಾತ ನೀಡುವಲ್ಲಿ ಆಂಗ್ಲರು ಸಫಲರಾದರು. ತಿಲಕ್ ವರ್ಮಾ (72 ರನ್, 55 ಎಸೆತ, 4 ಬೌಂಡರಿ, 5 ಸಿಕ್ಸರ್) ಆರ್ಧಶತಕದ ಫಲವಾಗಿ 19.2 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಗೆಲುವಿನ ನಗೆ ಬೀರಿತು.(ಏಜೆನ್ಸೀಸ್)