ಮಹಿಳೆಯರ ಐಪಿಎಲ್​ ಟೂರ್ನಿಯ​ ಬೆಂಗಳೂರು ಚರಣದ ಟಿಕೆಟ್​ ಮಾರಾಟ ಶುರು; ಈ ವೆಬ್​ಸೈಟ್​ನಲ್ಲಿ ಅಗ್ಗದ ಟಿಕೆಟ್​ಗಳು ಲಭ್ಯ...​

wpl web
Published on

ಬೆಂಗಳೂರು: ಫೆಬ್ರವರಿ 23ರಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​) ಮಹಿಳಾ ಟಿ20 ಟೂರ್ನಿಯ ಆರಂಭಿಕ 11 ಪಂದ್ಯಗಳ ಟಿಕೆಟ್​ ಮಾರಾಟ ಪ್ರಕ್ರಿಯೆ ಶನಿವಾರ ಆರಂಭಗೊಂಡಿದೆ.

ಬುಕ್​ಮೈಶೋ ವೆಬ್​ಸೈಟ್​ನಲ್ಲಿ ಟಿಕೆಟ್​ಗಳು ಲಭ್ಯವಿದ್ದು, 100 ರೂ. ಮುಖಬೆಲೆ ಹೊಂದಿವೆ. ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಮತ್ತು ಹಾಲಿ ರನ್ನರ್​ಅಪ್​ ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯೊಂದಿಗೆ ಟೂರ್ನಿ ಆರಂಭಗೊಳ್ಳಲಿದೆ.

ಆತಿಥೇಯ ಆರ್​ಸಿಬಿ ಮಹಿಳಾ ತಂಡ ಫೆಬ್ರವರಿ 4ರಂದು ಯುಪಿ ವಾರಿಯರ್ಸ್​ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ಮಾರ್ಚ್​ 4ರವರೆಗೆ ಬೆಂಗಳೂರಿನಲ್ಲಿ ಪ್ರತಿದಿನ ರಾತ್ರಿ 7.30ರಿಂದ ತಲಾ 1 ಪಂದ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net