500 ವಿಕೆಟ್​ ಬೇಟೆಯಾಡಿದ ಅಶ್ವಿನ್​ ಮುಂದಿನ ಗುರಿ ಅನಿಲ್​ ಕುಂಬ್ಳೆ ದಾಖಲೆ ಮುರಿಯುವುದು!

ash kum web
Published on

ರಾಜ್​ಕೋಟ್: ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ ಪೂರೈಸಿರುವ ಆರ್​. ಅಶ್ವಿನ್​, ಭಾರತ ಪರ ಸರ್ವಾಧಿಕ 619 ವಿಕೆಟ್​ ಕಬಳಿಸಿರುವ ಅನಿಲ್​ ಕುಂಬ್ಳೆ ಅವರ ದಾಖಲೆ ಮುರಿಯುವುದು ಮುಂದಿನ ಗುರಿ ಎಂದು ಹೇಳಿದ್ದಾರೆ.

"ನನಗಿನ್ನೂ 120 ವಿಕೆಟ್​ಗಳು ಬೇಕಾಗಿವೆ. ನನಗೀಗ 37 ವರ್ಷ. ಮುಂದೆ ಏನಾಗಬಹುದು ಎಂಬುದು ಗೊತ್ತಿಲ್ಲ. ಆದರೆ ನನ್ನ ಪ್ರಯತ್ನವಂತೂ ಇರುತ್ತದೆ' ಎಂದು ಅಶ್ವಿನ್​ ಹೇಳಿದ್ದಾರೆ.

"ನಾನು ಬ್ಯಾಟ್ಸ್​ಮನ್​ ಆಗಬೇಕೆಂದಿದ್ದೆ. ನಾನು ಸ್ಪಿನ್ನರ್​ ಆಗಿದ್ದು ಆಕಸ್ಮಿಕ. ಜೀವನ ನನಗೊಂದು ಅವಕಾಶ ಕಲ್ಪಿಸಿದೆ. ನಾನು ಸಿಎಸ್​ಕೆ ತಂಡ ಸೇರಿದಾಗ ಮುರಳೀಧರನ್​ ಹೊಸ ಚೆಂಡಿನಲ್ಲಿ ಬೌಲಿಂಗ್​ ಮಾಡಲು ಸಿದ್ಧರಿರಲಿಲ್ಲ. ಆಗ ನನಗೆ ಹೊಸ ಚೆಂಡಿನಲ್ಲಿ ಬೌಲಿಂಗ್​ ಮಾಡುವ ಅವಕಾಶ ಒಲಿಯಿತು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ನನ್ನ ವೃತ್ತೀಜಿವನದ ಆರಂಭ ಸಾಧಾರಣವಾಗಿದ್ದರೂ, ಐಪಿಎಲ್​ನಿಂದಾಗಿ ಎಲ್ಲರ ಗಮನಸೆಳೆಯುವಂತಾಯಿತು. ಅದರಿಂದ ಟೆಸ್ಟ್​ ಪದಾರ್ಪಣೆಯ ಅವಕಾಶವೂ ಲಭಿಸಿತು. ನಾನು ಟೆಸ್ಟ್​ ಬೌಲರ್​ ಆಗುವ ಬಗ್ಗೆ ಜನರು ಅನುಮಾನಪಟ್ಟಿದ್ದರು. 13 ವರ್ಷಗಳ ಬಳಿಕ ಈಗ ನನ್ನ ಸಾಧನೆಯೇನೂ ಕೆಟ್ಟದಾಗಿಲ್ಲ' ಎಂದು ಅಶ್ವಿನ್​ 500 ವಿಕೆಟ್​ಗಳ ಹಾದಿಯನ್ನು ಮೆಲುಕುಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net