

ಮುಂಬೈ: ಐದು ಬಾರಿ ಐಪಿಎಲ್ ಚಾಂಪಿಯನ್ಸ್ ಪಟ್ಟ ಪಡೆದಿರುವ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಅಲಂಕರಿಸಿದ್ದು, ಈಗಾಗಲೇ ಲೀಗ್ನಿಂದ ಹೊರಗುಳಿದಿದೆ. ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾರಿಂದ ನಾಯಕನ ಜವಾಬ್ದಾರಿಯನ್ನು ಹಸ್ತಾಂತರಿಸಿಕೊಂಡ ಹಾರ್ದಿಕ್, ಮೊದಲ ಪಂದ್ಯದಿಂದಲೂ ತಮ್ಮ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯುವಲ್ಲಿ ಶೇ.100 ರಷ್ಟು ವಿಫಲರಾಗಿದ್ದಾರೆ. ಸದ್ಯ ಪಾಂಡ್ಯ ಆಡಿದ ಸೋಲಿನ ಆಟ ನೋಡಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವ್ಯಾಟ್ಸಾನ್, ಮುಂಬೈ ಕ್ಯಾಪ್ಟನ್ಗೊಂದು ಬಹಳ ಮುಖ್ಯವಾದ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ಕಟೀಲು ಶಿವಳ್ಳಿ ಸ್ಪಂದನ ಕ್ರೀಡೋತ್ಸವ
ಇಂದು ಐಪಿಎಲ್ 17ನೇ ಆವೃತ್ತಿಯಲ್ಲಿ ತಮ್ಮ ಕಡೆಯ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡುತ್ತಿರುವ ಮುಂಬೈ ಇಂಡಿಯನ್ಸ್ಗೆ ಈ ಮ್ಯಾಚ್ ಗೆದ್ದರೂ ಸೋತರೂ ಅಂತ ದೊಡ್ಡ ಬದಲಾವಣೆಯೇನು ಕಂಡುಬರುವುದಿಲ್ಲ. ಯಾಕಂದ್ರೆ, ಎಂಐ ಈಗಾಗಲೇ ಲೀಗ್ನಿಂದ ಸಂಪೂರ್ಣವಾಗಿ ಹೊರಗುಳಿದಿದೆ. ಆದರೂ ಈ ಪಂದ್ಯದಲ್ಲಿ ಎಲ್ಎಸ್ಜಿಯನ್ನು ಪ್ಲೇಆಫ್ನಿಂದ ಹೊರಗಿಡಲು ಮುಂಬೈಗೆ ಸುವರ್ಣಾವಕಾಶವಿದೆ.
ಇನ್ನು ಈ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಕ್ಯಾಪ್ಟನ್ ಹಾರ್ದಿಕ್ಗೆ ಸಲಹೆ ನೀಡಿದ ಶೇನ್, ಈ ಸೀಸನ್ನಲ್ಲಿ ಬೃಹತ್ ಸಂಖ್ಯೆಯ ಅಭಿಮಾನಿಗಳನ್ನು ಈಗಾಗಲೇ ನಿರಾಸೆಗೊಳಿಸಿದ್ದೀರಿ. ಕನಿಷ್ಠ ಈ ಕಡೆಯ ಪಂದ್ಯವು ನಿಮ್ಮ ತವರಿನಲ್ಲಿ ನಡೆಯುತ್ತಿರುವ ಕಾರಣ, ಇಲ್ಲಿಯಾದರೂ ಅತ್ಯುತ್ತಮ ಪ್ರದರ್ಶನ ನೀಡಿ, ಅವರನ್ನು ಖುಷಿಪಡಿಸುವ ಕೆಲಸ ಮಾಡಿ ಎಂದಿದ್ದಾರೆ.
ಇದನ್ನೂ ಓದಿ: ಬ್ರಾೃಂಡ್ ಮಂಗಳೂರು ಪ್ರಶಸ್ತಿಗೆ ಅರ್ಜಿ ಆಹ್ವಾನ
"ಈ ಪಂದ್ಯದಲ್ಲಿ ತಂಡದ ಆಟಗಾರರಿಗಿಂತ ಹಾರ್ದಿಕ್ ಉತ್ತಮ ಪ್ರದರ್ಶನ ಕೊಡಬೇಕು. ಕಾರಣ, ಮುಂಬರುವ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಉಪನಾಯಕನಾಗಿ ಟೀಂ ಇಂಡಿಯಾ ಪರ ಆಡಲಿದ್ದಾರೆ. ಹಾಗಾಗಿ ಈ ಕಡೆಯ ಪಂದ್ಯದಲ್ಲಿ ತಮ್ಮ ಬ್ಯಾಟ್ನಿಂದಲೇ ಉತ್ತಮ ಪ್ರದರ್ಶನ ನೀಡಿ, ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸಿ" ಎಂದು ಕಿವಿಮಾತು ಹೇಳಿದ್ದಾರೆ,(ಏಜೆನ್ಸೀಸ್).