

ದುಬೈ: ಅಕ್ಟೋಬರ್ 3ರಿಂದ 20ರವರೆಗೆ ಯುಎಇಯಲ್ಲಿ ನಡೆಯಲಿರುವ 9ನೇ ಆವೃತ್ತಿಯ ಮಹಿಳೆಯರ ಟಿ20 ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಎಲ್ಲ ಮಹಿಳೆಯರೇ ರೆಫ್ರಿ ಮತ್ತು ಅಂಪೈರ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಿಂದಿನ 8 ವಿಶ್ವಕಪ್ಗಳಲ್ಲಿ ಪುರುಷರ ನೆರವನ್ನೂ ಪಡೆದುಕೊಳ್ಳಲಾಗಿತ್ತು. ಆದರೆ ಈ ಬಾರಿ ಬರೀ ಮಹಿಳೆಯರಷ್ಟೇ ಪಂದ್ಯದ ಅಧಿಕಾರಿಗಳಾಗಿರುತ್ತಾರೆ.
ಟೂರ್ನಿಯಲ್ಲಿ ಒಟ್ಟು ಮೂವರು ಮಹಿಳಾ ರೆಫ್ರಿಗಳು ಮತ್ತು 10 ಮಹಿಳಾ ಅಂಪೈರ್ಗಳು ಪಂದ್ಯ ಆಯೋಜನೆಗೆ ನೆರವಾಗಲಿದ್ದಾರೆ. ಈ ಪೈಕಿ ಜಿಎಸ್ ಲಕ್ಷಿ$್ಮ ಏಕೈಕ ಭಾರತೀಯ ರೆಫ್ರಿಯಾಗಿದ್ದರೆ, ವೃಂದಾ ರಾಥಿ ಏಕೈಕ ಭಾರತೀಯ ಅಂಪೈರ್ ಆಗಿದ್ದಾರೆ. ಐಸಿಸಿ ಶುಕ್ರವಾರ ಲೀಗ್ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಲಿರುವ ಅಂಪೈರ್-ರೆಫ್ರಿಗಳ ವಿವರವನ್ನು ಬಹಿರಂಗಪಡಿಸಿದೆ.