ಕೊಹ್ಲಿಯನ್ನ ದ್ವೇಷಿಸ್ತಾರಂತೆ ಈ ಕ್ರಿಕೆಟಿಗ; ಅವನು ನನಗೆ ಅತ್ಯಂತ ಸಾಮಾನ್ಯ ಕ್ರಿಕೆಟಿಗ ಎಂದ ನಾಯಕ

kohli
Published on

ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್​ ಕೊಹ್ಲಿ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವವರಲ್ಲಿ ವಿರಾಟ್​ ಕೊಹ್ಲಿ ಕೂಡ ಒಬ್ಬರು. ಆದರೆ ಈ ಒಬ್ಬ ಕ್ರಿಕೆಟಿಗನಿಗೆ ಕೊಹ್ಲಿಯನ್ನು ಕಂಡರೆ ದ್ವೇಷವಂತೆ. ಯಾರು ಆ ಕ್ರಿಕೆಟಿಗ ಎಂದು ತಿಳಿಯುವುದಕ್ಕೆ ಮುಂದೆ ಓದಿ.

ಐಪಿಎಲ್​ ಮುಗಿದಿರುವ ಬೆನ್ನಲ್ಲೇ ಆಸ್ಟ್ರೇಲಿಯಾ ಟೆಸ್ಟ್​ ಮ್ಯಾಚ್​ಗಳು ಆರಂಭವಾಗಲಿವೆ. ಅದಕ್ಕೆಂದು ಭಾರತದ ತಂಡ ಈಗಾಗಲೇ ಆಸ್ಟ್ರೇಲಿಯಾಕ್ಕೆ ಹೋಗಿ ಸೇರಿದೆ. ಅಲ್ಲಿ ಭಾರತದ ತಂಡದ ವಿರುದ್ಧ ಆಡಲಿರುವ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಟೆಸ್ಟ್​ಗಳ ನಾಯಕ ಟಿಮ್​ ಪೈನ್​ ಕೊಹ್ಲಿಯ ಬಗ್ಗೆ ಮಾತನಾಡಿದ್ದಾರೆ.

'ಕೊಹ್ಲಿಯ ಬಗ್ಗೆ ಅನೇಕರು ನನಗೆ ಪ್ರಶ್ನೆ ಕೇಳುತ್ತಾರೆ. ಆದರೆ ನನಗೆ ಆತ ಒಬ್ಬ ಸಾಮಾನ್ಯ ಕ್ರಿಕೆಟಿಗನಷ್ಟೇ. ಅದರ ಹೊರೆತಾಗಿ ಹೆಚ್ಚಿನ ಸಂಬಂಧ ನಮ್ಮಿಬ್ಬರ ಮಧ್ಯೆ ಇಲ್ಲ. ನನಗೆ ಮತ್ತು ನನ್ನ ತಂಡಕ್ಕೆ ಕೊಹ್ಲಿ ಬಗ್ಗೆ ದ್ವೇಷವಿದೆ. ಆದರೆ ಅವರು ಬ್ಯಾಟಿಂಗ್​ ಮಾಡುವ ಪರಿಗೆ ನಾವೆಲ್ಲರೂ ಸೋತಿದ್ದೇವೆ. ಅವರ ಬ್ಯಾಟಿಂಗ್​ ನೋಡಲು ನಾವೂ ಇಷ್ಟಪಡುತ್ತೇವೆ. ಆದರೆ ಅವರು ಹೆಚ್ಚು ರನ್​ ಹೊಡೆಯುವುದನ್ನು ಸಹಿಸಲಾಗುವುದಿಲ್ಲ' ಎಂದು ಅವರು ಹೇಳಿದ್ದಾರೆ.

ಮುಂದಿನ ಪಂದ್ಯಗಳಲ್ಲಿ ಉಂಟಾಗಲಿರುವ ಪೈಪೋಟಿಯ ಬಗ್ಗೆ ಮಾತನಾಡಿದ ಅವರು, ಎರಡು ಉತ್ತಮ ತಂಡಗಳಿದ್ದ ಮೇಲೆ ಉತ್ತಮ ಪೈಪೋಟಿ ಇದ್ದೇ ಇರುತ್ತದೆ. ಕೊಹ್ಲಿ ಅವರ ತಂಡದೊಂದಿಗೆ ಉತ್ತಮ ಪಂದ್ಯ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ. (ಏಜನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net