

Rohit Sharma: ಅ.19ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಏಕದಿನ ತಂಡಕ್ಕೆ ಶುಭಮನ್ ಗಿಲ್ ನಾಯಕನಾದರೆ, ಟಿ20ಗೆ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ ಆಗಿದ್ದಾರೆ. ಇನ್ನು ಈ ಮಧ್ಯೆ ಕ್ರಿಕೆಟ್ ದಿಗ್ಗಜರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದು, ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ. ಒಂದೆಡೆ ಇದು ಖುಷಿ ಸಂಗತಿಯಾದರೆ, ರೋಹಿತ್ರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಅವರ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ.
ಈ ಮೂಲಕ ಟೀಮ್ ಇಂಡಿಯಾದ ಏಕದಿನ ನಾಯಕನಾಗಿ ರೋಹಿತ್ ಶರ್ಮಾ ಅವರ ಪ್ರಯಾಣ ಅಂತ್ಯಗೊಂಡಿದೆ. ಈ ಸಂದರ್ಭದಲ್ಲಿ, ರೋಹಿತ್ ಶರ್ಮಾ ಇಲ್ಲಿಯವರೆಗೆ ಭಾರತದ ಏಕದಿನ ನಾಯಕನಾಗಿ ಎಷ್ಟು ಪಂದ್ಯಗಳನ್ನು ಆಡಿದ್ದಾರೆ, ಆಡಿದ ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದೆಷ್ಟು? ಸೋಲು ಕಂಡಿದ್ದೆಷ್ಟು? ಏಕದಿನ ಕ್ಯಾಪ್ಟನ್ ಆಗಿ ಹಿಟ್‌ಮ್ಯಾನ್ ಸಾಧನೆಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.
ರೋಹಿತ್ ನಾಯಕತ್ವದಲ್ಲಿ, ಭಾರತ ಒಟ್ಟು 56 ಏಕದಿನ ಪಂದ್ಯಗಳನ್ನಾಡಿದೆ. ಅವುಗಳ ಪೈಕಿ 42 ಗೆದ್ದರೆ, 12ರಲ್ಲಿ ಸೋತಿದೆ. ಇದರಲ್ಲಿ ಗೆಲುವಿನ ಶೇಕಡಾವಾರು 76. ರೋಹಿತ್ ಟೀಮ್ ಇಂಡಿಯಾದ ಅತ್ಯುತ್ತಮ ಏಕದಿನ ನಾಯಕರಲ್ಲಿ ಒಬ್ಬರು ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಸಾಕ್ಷಿ ಬೇಕಿಲ್ಲ. ಏಕದಿನ ತಂಡದ ಕ್ಯಾಪ್ಟನ್ ಆಗಿ ರೋಹಿತ್ ಕೊಟ್ಟ ಕೊಡುಗೆಗಳು ಹೀಗಿವೆ ನೋಡಿ.