

ನವದೆಹಲಿ: ಜೂ.29ರಂದು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ (T20 World Cup 2024) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಟೀಮ್ ಇಂಡಿಯಾ ರೋಮಾಂಚನಕಾರಿ ಆಟಕ್ಕೆ ಸಾಕ್ಷಿಯಾಯಿತು. 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ತಂದುಕೊಟ್ಟ ನಾಯಕ ರೋಹಿತ್ ಶರ್ಮ (Rohit Sharma), ದೇಶವ್ಯಾಪಿ ಕ್ರಿಕೆಟ್ ಅಭಿಮಾನಿಗಳ ಅಭೂತಪೂರ್ವ ಬೆಂಬಲ ಮತ್ತು ಅಭಿನಂದನಗಳಿಗೆ ಭಾಜನರಾದರು. ಟೂರ್ನಿ ಪೂರ ಅದ್ಭುತ ನಾಯಕತ್ವ ಹಾಗೂ ಪ್ರದರ್ಶನ ನೀಡಿದ ರೋಹಿತ್, ಕೋಟ್ಯಾಂತರ ಅಭಿಮಾನಿಗಳ ಮುಂದೆ ಟಿ20 ಫಾರ್ಮೆಟ್ಗೆ ನಿವೃತ್ತಿ ಘೋಷಿಸಿದರು.
ಇದನ್ನೂ ಓದಿ: ನೀರುಪಾಲಾಗಿದ್ದ ಅರ್ಜುನ್ಗೆ ನಾಡಿನ ವಿದಾಯ
ನಿವೃತ್ತಿ ಘೋಷಿಸಿದ ಬಳಿಕ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮ, ಅಂತಿಮವಾಗಿ ಟೀಮ್ನ ಗೆಲುವಿನ ದಡಕ್ಕೆ ಸೇರಿಸುವಲ್ಲಿ ವಿಫಲರಾದರು. ಸದ್ಯ ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ತಮ್ಮ ಕ್ರಿಕೆಟ್ ಕರಿಯರ್ ಬಗ್ಗೆ ಮನಬಿಚ್ಚಿ ಮಾತನಾಡಿದ ಹಿಟ್ಮ್ಯಾನ್, ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಗೆದ್ದ ಟಿ20 ಟ್ರೋಫಿ ಸಂದರ್ಭವನ್ನು ಉಲ್ಲೇಖಿಸಿ ಒಂದಷ್ಟು ಕುತೂಹಲಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.
"ನಾನು ಟಿ20 ಟೂರ್ನಿಯಿಂದ ನಿವೃತ್ತಿ ಹೊಂದಲು ಒಂದೇ ಒಂದು ಕಾರಣ ಏನೆಂದರೆ ನಾನು ರಿಟೈರ್ ಆಗಲು ಇದೇ ಸೂಕ್ತ ಸಮಯ ಎಂದು ಭಾವಿಸಿದೆ. ಟಿ20 ಫಾರ್ಮೆಟ್ನ ಬಹಳ ಆನಂದಿಸಿದ್ದೇನೆ. 17 ವರ್ಷಗಳ ಕಾಲ ಇದೊಂದು ಫಾರ್ಮೆಟ್ ಆಡಿದ್ದೇನೆ ಹಾಗೂ ನಾನು ಉತ್ತಮ ಪ್ರದರ್ಶನ ತೋರಿದ್ದೇನೆ ಮತ್ತು ಅಂದುಕೊಂಡಿದ್ದನ್ನು ಮಾಡಿ ಮುಗಿಸಿದ್ದೇನೆ. ಮುಂದೆ ನನ್ನಿತರ ವಿಷಯಗಳ ಬಗ್ಗೆ ಚಿಂತಿಸುವ ಸಮಯ ಎಂದು ದೃಢವಾಗಿ ನಿರ್ಧರಿಸಿ ನಿವೃತ್ತಿ ಘೋಷಿಸಿದೆ. ಅದರಲ್ಲೂ ಕೋಟ್ಯಾಂತರ ಅಭಿಮಾನಿಗಳ ಮುಂದೆ ಟ್ರೋಫಿ ಎತ್ತಿಹಿಡಿದ ಸಂಭ್ರಮ, ನನ್ನ ನಿವೃತ್ತಿ ಘೋಷಿಸಲು ಒಂದೊಳ್ಳೆ ಸಮಯ ಅನಿಸಿತು" ಎಂದರು.
":ಇಲ್ಲಿಯವರೆಗೂ ತಂಡಕ್ಕೆ ನಾನು ಒಂದಷ್ಟು ಕೊಡುಗೆ ಕೊಟ್ಟಿದ್ದೇನೆ. ನಿವೃತ್ತಿ ಘೋಷಿಸಿದ ಬಳಿಕ ತಂಡವನ್ನು ಕೊಂಡೊಯ್ಯಲು ಹಲವಾರು ಪ್ರತಿಭಾವಂತ ಆಟಗಾರರಿದ್ದಾರೆ. ನಾನು ಎಲ್ಲಾ ಮೂರು ಫಾರ್ಮೆಟ್ಗಳನ್ನು ಸುಲಭವಾಗಿ ಆಡಬಲ್ಲೆ. ಆದ್ರೆ, ಅದಕ್ಕಾಗಿ ನನ್ನ ಫಿಟ್ನೆಸ್ ಬಹಳ ಮುಖ್ಯ. ಈ ವಿಷಯದಲ್ಲಿ ನೀವು ನಿಮ್ಮ ಮನಸ್ಸನ್ನು ಹೇಗೆ ಟ್ರೈನ್ ಮಾಡುತ್ತೀರಿ ಎಂಬುದೇ ಇಲ್ಲಿ ಅತೀ ಮುಖ್ಯ" ಎಂದು ಹೇಳಿದರು,(ಏಜೆನ್ಸೀಸ್).