

ರಾವಲ್ಪಿಂಡಿ: ಪಾಕಿಸ್ತಾನ ಕ್ರಿಕೆಟ್ನಲ್ಲಿ (Pakistan Cricket) ಸದ್ಯ ಯಾವುದು ಸರಿಯಿಲ್ಲ ಅನ್ನೋದು ಕೆಲವು ತಿಂಗಳಿನಿಂದ ಒಂದಲ್ಲ ಒಂದು ಸುದ್ದಿಯಿಂದ ಮತ್ತಷ್ಟು ಸ್ಪಷ್ಟವಾಗುತ್ತಿದೆ. ಬಾಬರ್ ಆಜಂ ನಾಯಕತ್ವದಲ್ಲಿ ಹೀನಾಯ ಸೋಲು ಕಂಡಿರುವ ಪಾಕ್ ತಂಡ, ಇದೀಗ ಕೇವಲ ಟಿ20 ಮಾತ್ರವಲ್ಲದೇ ಏಕದಿನ, ಟೆಸ್ಟ್ ಫಾರ್ಮೆಟ್ಗಳನ್ನು ವಶಪಡಿಸಿಕೊಳ್ಳುವಲ್ಲಿಯೂ ಸಹ ವಿಫಲವಾಗಿದೆ. ಸದ್ಯ ಈ ಎಲ್ಲಾ ವಿಷಯಗಳಿಂದ ತತ್ತರಿಸಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (Pakistan Cricket Board), ಇತ್ತೀಚೆಗಷ್ಟೇ ಆಯ್ಕೆಗಾರ ಸ್ಥಾನಕ್ಕೆ ಮಾಜಿ ಹಿರಿಯ ಕ್ರಿಕೆಟಿಗ ಮೊಹಮ್ಮದ್ ಯೂಸಫ್ ನೀಡಿದ ರಾಜೀನಾಮೆಯಿಂದ ಸಂಪೂರ್ಣವಾಗಿ ಕುಸಿದು ಹೋಗಿದೆ. ಇಲ್ಲಿ ಪಿಸಿಬಿಯ ಆಡಳಿತ ಸರಿಯಿಲ್ಲವೋ ಅಥವಾ ಆಟಗಾರರ ಶ್ರಮದಲ್ಲಿ ಕೊರತೆಯಿದೆಯೋ ಎಂಬುದು ತಿಳಿಯದಂತಾಗಿದೆ. ಸದ್ಯ ಪಾಕ್ ಕ್ರಿಕೆಟ್ನ ಈ ಪರಿಸ್ಥಿತಿಗೆ ಹಿರಿಯ ಮಾಜಿ ಆಟಗಾರರು ಬಾಬರ್ ಆಜಂ ಕಾರಣ ಎಂದು ನೇರವಾಗಿ ಬೆರಳ ತೋರಿಸಿ ಆರೋಪಿಸುತ್ತಿದ್ದಾರೆ. ಇದೀಗ ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ನಾಸರ್ ಹುಸೈನ್ (Nasser Hussain), ಇದಕ್ಕೆಲ್ಲ ಬಾಬರ್ ಮಾತ್ರವೇ ಕಾರಣ ಅಲ್ಲ ಎಂದು ಸ್ಪಷ್ಟನೆ ಜತೆ ಸೂಕ್ತ ಕಾರಣ ನೀಡಿದ್ದಾರೆ.
ಇದನ್ನೂ ಓದಿ: ಒಳ ಮೀಸಲಾತಿ ಜಾರಿಗಾಗಿ ಅ. 16 ರಂದು ಪ್ರತಿಭಟನೆ
ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳನ್ನು ಹೀನಾಯವಾಗಿ ಸೋತಿರುವ ಪಾಕಿಸ್ತಾನಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಛೀಮಾರಿ, ಟೀಕೆ ವ್ಯಕ್ತವಾಗುತ್ತಿದೆ. ಇನ್ನು ಇಂಗ್ಲೆಂಡ್ ವಿರುದ್ಧ ಇರುವ ಇನ್ನೆರೆಡು ಪಂದ್ಯಗಳಿಗೆ ತಂಡದಿಂದ ಬಾಬರ್ ಅಜಂ, ಶಾಹೀನ್ ಆಫ್ರಿದಿ ಮತ್ತು ನಸೀಮ್ ಶಾರನ್ನು ಕೈಬಿಟ್ಟಿದ್ದಕ್ಕಾಗಿ ಗರಂ ಆಗಿರುವ ನಾಸೆರ್, ಇಲ್ಲಿ ಬಾಬರ್ ಆಜಂ ನಾಯಕತ್ವ ಅಥವಾ ಯಾರ ವಿರುದ್ಧವು ಸಿಡಿದೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಪಾಕಿಸ್ತಾನ ಕ್ರಿಕೆಟ್ ಆಡಳಿತದ ಸಮಸ್ಯೆ ಏನು? ಇದಕ್ಕೆ ಮೂಲ ಕಾರಣವೇನು ಎಂಬುದನ್ನು ಕಡೆಗೂ ಎಲ್ಲರ ಮುಂದೆ ನಾಸರ್ ಬಹಿರಂಗ ಪಡಿಸಿದ್ದಾರೆ.
"ಇಲ್ಲಿ ಸಮಸ್ಯೆ ಬಾಬರ್ ಆಜಂ, ಶಾಹೀನ್ ಅಫ್ರಿದಿ ಅಥವಾ ನಸೀಮ್ ಶಾ ಅಲ್ಲ. ಪಾಕಿಸ್ತಾನ ಕ್ರಿಕೆಟ್ ಅನ್ನು ತೆರೆಮರೆಯಿಂದ ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದೇ ದೊಡ್ಡ ಸಮಸ್ಯೆ. ಪಾಕಿಸ್ತಾನವು 26 ಅಥವಾ 27 ವಿಭಿನ್ನ ಆಯ್ಕೆಗಾರರನ್ನು ಹೊಂದಿದೆ ಎಂದು ನಾನು ಎಲ್ಲೋ ಓದಿದ್ದೇನೆ. ಇಂಗ್ಲೆಂಡ್ ದೀರ್ಘಾವಧಿಯಲ್ಲಿ ಕೇವಲ ಎರಡು ಅಥವಾ ಮೂರು ಹೊಂದಿತ್ತು. ನೀವು ನಾಯಕರು, ಕೋಚ್‌ಗಳು ಮತ್ತು ಆಯ್ಕೆಗಾರರನ್ನು ಪದೇ ಪದೇ ಬದಲಾಯಿಸುತ್ತಿದ್ದರೆ, ಉತ್ತಮ ಫಲಿತಾಂಶಗಳು ಬರುವುದಿಲ್ಲ. ಒಂದು ಯಶಸ್ವಿ ಕ್ರೀಡಾ ತಂಡವು ಈ ರೀತಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಕಳಪೆ ಪ್ಲ್ಯಾನ್ಗಳೇ ತಂಡದ ಹೀನಾಯ ಸೋಲಿಗೆ ಕಾರಣ. ಒಂದೆರೆಡು ಪಂದ್ಯ ಸೋತ ನಂತರ ತಲೆಮೇಲೆ ಕೈಯಿಟ್ಟು ಚಿಂತಿಸುತ್ತೀರಾ. ಇದು ಯಾವ ಪ್ರಯೋಜನವಿಲ್ಲ" ಎಂದು ನಾಸೆರ್ ಹೇಳಿದ್ದಾರೆ.