

ದುಬೈ/ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2021 ಪಂದ್ಯಾವಳಿಯಲ್ಲಿ ವಿಜಯಪತಾಕೆ ಹಾರಿಸಿದ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ) ತಂಡಕ್ಕೆ 20 ಕೋಟಿ ರೂಪಾಯಿಗಳ ಬಹುಮಾನ ನೀಡಲಾಗಿದೆ. ಅದೇ 27 ರನ್ಗಳ ಅಂತರದಲ್ಲಿ ಸೋಲನುಭವಿಸಿದ ರನ್ನರ್ ಅಪ್ ತಂಡವಾದ ಕೊಲ್ಕತ ನೈಟ್ ರೈಡರ್ಸ್ಗೆ 12.5 ಕೋಟಿ ರೂ. ಬಹುಮಾನ ಸಂದಿದೆ.
ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಸೋಲನುಭವಿಸಿದ ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಾಗೂ ಖ್ವಾಲಿಫೈಯರ್ 2ನಲ್ಲಿ ಸೋಲನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ತಲಾ 8.75 ಕೋಟಿ ರೂ. ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. (ಏಜೆನ್ಸೀಸ್)