ಐಪಿಎಲ್​ಗೆ ಅಡಚಣೆ ಇದೇ ಮೊದಲಲ್ಲ; 2021ರಲ್ಲೂ ಅರ್ಧದಲ್ಲೇ ಸ್ಥಗಿತಗೊಂಡಿತ್ತು!

web ipl 18
Published on

ಬೆಂಗಳೂರು: ಐಪಿಎಲ್​ ಟೂರ್ನಿ ಮೊಟಕುಗೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2021ರಲ್ಲಿ ಕರೊನಾ ಸಮಯದಲ್ಲೂ ಐಪಿಎಲ್​ 14ನೇ ಆವೃತ್ತಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಆಗ ಟೂರ್ನಿಯ ಬಯೋಬಬಲ್​ನಲ್ಲಿ ಹೆಚ್ಚಿನ ಆಟಗಾರರನ್ನು ಕರೊನಾ ಸೋಂಕು ಕಾಡಿದ್ದರಿಂದ ಟೂರ್ನಿಯ ಮೊದಲ 29 ಪಂದ್ಯಗಳ ಬಳಿಕ ಸ್ಥಗಿತಗೊಂಡಿತ್ತು. ನಂತರದಲ್ಲಿ ಸೆಪ್ಟೆಂಬರ್​ನಲ್ಲಿ ಯುಎಇಯಲ್ಲಿ ಟೂರ್ನಿಯ ಉಳಿದ ಪಂದ್ಯಗಳನ್ನು ಮರುನಿಗದಿಪಡಿಸಲಾಗಿತ್ತು.

ಇದರ ಹೊರತಾಗಿ 2020ರ ಆವೃತ್ತಿ ಕರೊನಾದಿಂದಾಗಿ ಸಂಪೂರ್ಣ ಮುಂದೂಡಿಕೆಯಾಗಿ ಸೆಪ್ಟೆಂಬರ್​&ಅಕ್ಟೋಬರ್​ನಲ್ಲಿ ಯುಎಇಯಲ್ಲಿ ಆಯೋಜನೆಗೊಂಡಿದ್ದರೆ, 2014ರಲ್ಲಿ ಲೋಕಸಭಾ ಚುನಾವಣೆಯಿಂದಾಗಿ ಟೂರ್ನಿಯ ಮೊದಲಾರ್ಧದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಅದಕ್ಕೆ ಮುನ್ನ 2009ರಲ್ಲಿ ಇದೇ ಕಾರಣಕ್ಕೆ ಸಂಪೂರ್ಣ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net